Home ಕರಾವಳಿ ಸ್ವಾತಂತ್ರೋತ್ಸವದ ಪ್ರಯುಕ್ತ ಆಯೋಜಿಸಿದ್ದ ರಥದಲ್ಲಿ ಬ್ರಿಟಿಷರ ಏಜಂಟನಾಗಿದ್ದ ಸಾವರ್ಕರ್ ಫೋಟೋ ಬಳಸಿದ್ದು ಖಂಡನೀಯ: SDPI

ಸ್ವಾತಂತ್ರೋತ್ಸವದ ಪ್ರಯುಕ್ತ ಆಯೋಜಿಸಿದ್ದ ರಥದಲ್ಲಿ ಬ್ರಿಟಿಷರ ಏಜಂಟನಾಗಿದ್ದ ಸಾವರ್ಕರ್ ಫೋಟೋ ಬಳಸಿದ್ದು ಖಂಡನೀಯ: SDPI

ಪುತ್ತೂರು : ಸ್ವಾತಂತ್ರ್ಯ ಅಮ್ರತ ಮಹೋತ್ಸವದ ಅಂಗವಾಗಿ ಕಬಕ ಗ್ರಾಮ ಪಂಚಾಯತ್ ವತಿಯಿಂದ ಆಯೋಜಿಸಿದ್ದ ರಥದಲ್ಲಿ ಬ್ರಿಟೀಷರಿಗೆ ಕ್ಷಮಾಪಣ ಪತ್ರ ಬರೆದ ದೇಶದ್ರೋಹಿ ಸಾವರ್ಕರ್ ಚಿತ್ರ ಬಳಸುವ ಮೂಲಕ ಕಬಕ ಪಂಚಾಯತ್ ಆಡಳಿತ ನೈಜ ಸ್ವಾತಂತ್ರ್ಯ ಹೋರಾಟಗಾರರನ್ನು ಅವಮಾನಿಸಿದೆ . ಹಾಗೂ ಇದನ್ನು ಪ್ರಶ್ನಿಸಿದ SDPI ಕಾರ್ಯಕರ್ತರನ್ನು ಶಾಸಕರ ಕುಮ್ಮಕ್ಕಿನಿಂದ ಬಂಧಿಸಿದ ಕ್ರಮವನ್ನು SDPI ಜಿಲ್ಲಾಧ್ಯಕ್ಷರಾದ ಅಥಾವುಲ್ಲ ಜೋಕಟ್ಟೆ ಖಂಡಿಸಿದ್ದಾರೆ

ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ SDPI ಕಬಕ ಪಂಚಾಯತ್ ಆಡಳಿತವು ಯಾವುದೇ ಸದಸ್ಯರ ಗಮನಕ್ಕೆ ತರದೆ ಏಕಾಏಕಿ ಸಂವಿಧಾನ ವಿರೋದಿಯಾಗಿ ಸಂಘಪರಿವಾರದ ಅಜೆಂಡಾವನ್ನ ಜಾರಿಗೆ ತರಲು ಹೊರಟ ಪಿಡಿಯೊ ಹಾಗೂ ಇತರ ಸಿಬ್ಬಂದಿಗಳ ಮೇಲೆ ಪೊಲೀಸರು ಸ್ವಯಂ ಪ್ರೇರಿತ ದೇಶದ್ರೋಹಿ ಕೇಸು ದಾಖಲಿಸಬೇಕೆಂದು ಒತ್ತಾಯಿಸಿದೆ

ನ್ಯಾಯಯುತವಾಗಿ ಪ್ರತಿಭಟನೆ ನಡೆಸಿದ SDPI ಕಾರ್ಯಕರ್ತರನ್ನ ಜವಬ್ದಾರಿಯುತ ಸ್ಥಾನದಲ್ಲಿರುವ ಪುತ್ತೂರು ಶಾಸಕ ಸಂಜೀವ ಮಠಂದೂರು ರವರ ಸೂಚನೆಯಂತೆ ಪೋಲೀಸರ ಕ್ರಮ ಕಾನೂನು ಉಲ್ಲಂಘನೆ ಯಾಗಿದೆ . ಕೂಡಲೇ ಕಾರ್ಯಕರ್ತರನ್ನ ಬಿಡುಗಡೆ ಮಾಡಿ ಪಂಚಾಯತ್ ಸಿಬ್ಬಂದಿಗಳ ಮೇಲೆ ದೇಶದ್ರೋಹಿ ಕೇಸು ದಾಖಲಿಸಿ ಅವರನ್ನ ಬಂಧಿಸಬೇಕು ಇಲ್ಲದಿದ್ದರೆ ಪೋಲಿಸ್ ಠಾಣೆ ಹಾಗೂ ಸಂಬಂದಪಟ್ಟ ಪೋಲಿಸ್ ಅಧಿಕಾರಿಗಳ ಕಛೇರಿ ಮುಂದೆ ಬ್ರಹತ್ ಪ್ರತಿಭಟನೆ ಹಾಗೂ ಕಾನೂನು ಹೋರಾಟ ಕೈಗೊಳ್ಳಲಿದ್ದೇವೆ ಎಂದು ಅಥಾವುಲ್ಲ ಜೋಕಟ್ಟೆ ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.

Join Whatsapp
Exit mobile version