► ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ ಸಂಘಪರಿವಾರದ ಮೇಲೆ ಅಷ್ಟು ಅನುಕಂಪ ಇದ್ದರೆ ತಮ್ಮ ಸ್ತಾನಕ್ಕೆ ರಾಜಿನಾಮೆ ನೀಡಿ ಸಂಘದ ಶಾಖೆ ಸೇರಿಕೊಳ್ಳಲಿ: ಅಶ್ರಫ್ ಬಾವು
ಕಬಕ : 75 ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ಆಚರಿಸುವ ನೆಪದಲ್ಲಿ ಕಬಕ ಗ್ರಾಮ ಪಂಚಾಯತ್ ವತಿಯಿಂದ ಗ್ರಾ.ಪಂ ವ್ಯಾಪ್ತಿಯಲ್ಲಿ ಸಂಚರಿಸಿದ ರಥಕ್ಕೆ ಬ್ರಿಟಿಷರಿಗೆ ಕ್ಷಮಾಪಣೆ ಪತ್ರ ನೀಡಿದ ಹೇಡಿ ಸಾವರ್ಕರ್ ನ ಫೋಟೋ ಬಳಕೆ ಮಾಡಿ ನೈಜ ಸ್ವಾತಂತ್ರ್ಯ ಹೋರಾಟಗಾರರಿಗೆ ಅವಮಾನ ವೆಸಗಿದ ಕಬಕ ಗ್ರಾಮ ಪಂಚಾಯತ್ ನ ನಡೆಯನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ತೀವ್ರವಾಗಿ ಖಂಡಿಸುತ್ತದೆ.
ಸ್ವಾತಂತ್ರ್ಯ ದಿನದಂದು ಈ ರೀತಿಯ ರಥ ಯಾತ್ರೆಯ ಬಗ್ಗೆ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಯಾವುದೇ ತೀರ್ಮಾನ ಮಾಡದೆ ಪಂಚಾಯತ್ ಸದಸ್ಯರ ಗಮನಕ್ಕೆ ತಾರದೇ ಮತ್ತು ಪೋಲಿಸ್ ಇಲಾಖೆಯ ಗಮನಕ್ಕೂ ತಾರದೇ ಸಂಘಪರಿವಾರದ ಅಣತಿಯಂತೆ ನಡೆದ ಈ ರಥಯಾತ್ರೆಯಲ್ಲಿ ಬ್ರಿಟಿಷ್ ರ ಬೂಟ್ ನೆಕ್ಕಿ ಕ್ಷಮಾಪಣೆ ಪತ್ರ ನೀಡಿದ ಹೇಡಿ ದೇಶ ದ್ರೋಹಿ ಸಾರ್ವರ್ಕರ್ ನ ಫೋಟೋ ಬಳಕೆ ಮಾಡಿರುವುದು ಕಬಕ ಗ್ರಾಮ ಪಂಚಾಯತಿಯು ನಡೆಯು ನೈಜ ಸ್ವಾತಂತ್ರ್ಯ ಹೋರಾಟಗಾರರಿಗೆ ಮಾಡಿದ ಅವಮಾನ ವಾಗಿದೆ.ಮಾತ್ರವಲ್ಲದೆ ಸರ್ಕಾರಿ ಕಾರ್ಯಕ್ರಮವನ್ನು RSS/ ಸಂಘಪರಿವಾರದ ಕಾರ್ಯಕ್ರಮದಂತೆ ಆಯೋಜಿಸಿದ ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ ಅವರ ಮೇಲೆ ಅಷ್ಟು ಅನುಕಂಪ ಇದ್ದರೆ ತಮ್ಮ ಸ್ತಾನಕ್ಕೆ ರಾಜಿನಾಮೆ ನೀಡಿ ಸಂಘದ ಶಾಖೆಗೆ ಸೇರಿಕೊಳ್ಳಲಿ,ಅದು ಬಿಟ್ಟು ಸರ್ಕಾರಿ ವ್ಯವಸ್ಥೆಯೊಳಗೆ ನುಸುಳಿ ಸಂಘದ ಹಿಡನ್ ಅಜೆಂಡಾಗಳನ್ನು ಈಡೇರಿಸಲು SDPI ಅವಕಾಶ ನೀಡುವುದಿಲ್ಲ ಎಂದು ಪಕ್ಷದ ಮುಖಂಡ ಅಶ್ರಫ್ ಬಾವು ಪತ್ರಿಕಾ ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.
ಹಾಗಾಗಿ ಬ್ರಿಟಿಷ್ ರಿಗೆ ಕ್ಷಮಾಪಣಾ ಪತ್ರ ನೀಡಿದ ಹೇಡಿ ಸಾರ್ವರ್ಕರ್ ನ ಫೋಟೋ ವನ್ನು ಗ್ರಾಮ ಪಂಚಾಯತ್ ಯ ವಾಹನದಲ್ಲಿ ಬಳಕೆ ಮಾಡಿದ ಗ್ರಾಮ ಪಂಚಾಯತ್ ನ ವಿರುದ್ಧ ಪೋಲಿಸ್ ಇಲಾಖೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ.