Home ಟಾಪ್ ಸುದ್ದಿಗಳು ಯಮೆನ್ ಮೇಲೆ ಸೌದಿ ಒಕ್ಕೂಟ ವೈಮಾನಿಕ ದಾಳಿ: 14 ಮಂದಿ ಸಾವು

ಯಮೆನ್ ಮೇಲೆ ಸೌದಿ ಒಕ್ಕೂಟ ವೈಮಾನಿಕ ದಾಳಿ: 14 ಮಂದಿ ಸಾವು

ಕೈರೊ: ಸೋಮವಾರ ಯುಎಇ ರಾಜಧಾನಿ ಅಬುಧಾಬಿಯಲ್ಲಿ ಹೌಥಿ ಬಂಡುಕೋರರು ನಡೆಸಿದ ಡ್ರೋನ್ ದಾಳಿ ಬೆನ್ನಲ್ಲೇ ಸೌದಿ ಒಕ್ಕೂಟ ಯಮೆನ್ ಮೇಲೆ ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಠ 14 ಮಂದಿ ಸಾವನ್ನಪ್ಪಿದ್ದಾರೆ.

ಯಮೆನ್ ನ ರಾಜಧಾನಿ ಸನಾ ಮೇಲೆ ಈ ವೈಮಾನಿಕ ದಾಳಿ ನಡೆದಿದ್ದು, ಮಧ್ಯ ಪ್ರಾಚ್ಯ ರಾಷ್ಟ್ರಗಳಲ್ಲಿ ಮತ್ತೆ ಬಾಂಬ್ ಸದ್ದು ಮಾಡತೊಡಗಿದೆ.

ಮಂಗಳವಾರ ನಡೆದ ಈ ಘಟನೆಯಲ್ಲಿ 14 ಮಂದಿ ಸಾವನ್ನಪ್ಪಿರುವುದು ಪ್ರಾಥಮಿಕ ವರದಿಯಿಂದ ಬಹಿರಂಗವಾಗಿದೆ. ಈ ದಾಳಿಯಲ್ಲಿ ಸೇನೆಯ ಮಾಜಿ ಅಧಿಕಾರಿಯೊಬ್ಬರ ಮನೆಗೆ ಹಾನಿಗೀಡಾಗಿದೆ. ಈ ವೇಳೆ ಆತನ ಪತ್ನಿ, ಪುತ್ರ ಮತ್ತು ಕುಟುಂಬಸ್ಥರು ಸಾವನ್ನಪ್ಪಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

2014 ರ ಕೊನೆಯಲ್ಲಿ ಹೌಥಿ ಬಂಡುಕೋರರು ರಾಜಧಾನಿ ಮತ್ತು ಉತ್ತರ ಯಮೆನ್ ನ ಕೆಲವು ಭಾಗಗಳನ್ನು ವಶಪಡಿಸಿಕೊಂಡ ಬಳಿಕ ಪಲಾಯನ ಮಾಡಿದ ಅಧ್ಯಕ್ಷ ಅಬ್ದ್ ರಬ್ಬು ಮನ್ಸೂರ್ ಹಾದಿ ಅವರ ಸರ್ಕಾರವನ್ನು ಮರುಸ್ಥಾಪಿಸಲು ಸೌದಿ ಮತ್ತು ಯುಎಇ 2015 ರಲ್ಲಿ ಯಮೆನ್ ವಿರುದ್ಧ ಮಧ್ಯಪ್ರವೇಶಿಸಿತ್ತು.

ಯುಎಇ ದಾಳಿಗೆ ಪ್ರತೀಕಾರ?

ಯುಎಇ ರಾಜಧಾನಿ ಅಬುಧಾಬಿಯ ಪೆಟ್ರೋಲ್ ಟ್ಯಾಂಕ್ ಗಳ ಇರಾನ್ ಬೆಂಬಲಿತ ಹೌಥಿ ಬಂಡುಕೋರರು ಸೋಮವಾರ ನಡೆಸಿದ ಡ್ರೋನ್ ದಾಳಿಯಲ್ಲಿ ಮೂವರು ಸಾವನ್ನಪ್ಪಿ, ಆರು ಮಂದಿ ಗಾಯಗೊಂಡಿದ್ದರು. ಈ ದಾಳಿಗೆ ಪ್ರತೀಕಾರವಾಗಿ ಮಂಗಳವಾರ ಯಮೆನ್ ಮೇಲೆ ದಾಳಿ ನಡೆದಿದೆ ಎಂದು ಹೇಳಲಾಗಿದೆ.

Join Whatsapp
Exit mobile version