Home ಗಲ್ಫ್ ಸೌದಿ ಅರೇಬಿಯಾ: ವಿದೇಶಿ ಯಾತ್ರಾರ್ಥಿಗಳಿಗೆ ಪುನರಾವರ್ತಿತ ಉಮ್ರಾಕ್ಕೆ ನಿರ್ಬಂಧ

ಸೌದಿ ಅರೇಬಿಯಾ: ವಿದೇಶಿ ಯಾತ್ರಾರ್ಥಿಗಳಿಗೆ ಪುನರಾವರ್ತಿತ ಉಮ್ರಾಕ್ಕೆ ನಿರ್ಬಂಧ

ರಿಯಾದ್: ಹೆಚ್ಚುತ್ತಿರುವ ಕೋವಿಡ್ ಪ್ರಕರಣದ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾವು ವಿದೇಶಿ ಯಾತ್ರಾರ್ಥಿಗಳಿಗೆ ಪುನರಾವರ್ತಿತ ಉಮ್ರಾ ನಿರ್ವಹಣೆಗೆ ತಡೆ ನೀಡಿದೆ.

ಈ ಮಧ್ಯೆ 30 ದಿನಗಳ ವಾಸ್ತವ್ಯದ ವೇಳೆ ಕೇವಲ ಮೂರು ಬಾರಿ ಮಾತ್ರ ಉಮ್ರಾ ನಿರ್ವಹಿಸಲು ಪ್ರಾಧಿಕಾರ ಅವಕಾಶ ನೀಡಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಎರಡು ಉಮ್ರಾಗಳ ನಡುವಿನ ಅವಧಿ ಕನಿಷ್ಠ 10 ದಿನಗಳಾಗಿರಬೇಕು. ಉಮ್ರಾ ನಿರ್ವಹಿಸುವವರಿಗೆ ಕನಿಷ್ಠ 12 ವರ್ಷ ವಯಸ್ಸಾಗಿರಬೇಕು ಎಂದು ಹಜ್ ಮತ್ತು ಉಮ್ರಾ ಸಚಿವಾಲಯವು ತಿಳಿಸಿದೆ.

Join Whatsapp
Exit mobile version