ರಿಯಾದ್: ಪೂರ್ವ ಜೆರೂಸಲೇಂ ಬಳಿ ನೂರಾರು ಹೊಸ ವಸಾಹತುಗಳನ್ನು ನಿರ್ಮಿಸುವ ಇಸ್ರೇಲಿ ನಿರ್ಣಯದ ಕುರಿತು ಸೌದಿ ಅರೇಬಿಯಾ ತೀವ್ರ ಆತಂಕ ವ್ಯಕ್ತಪಡಿಸಿದೆ.
ಸೌದಿ ಅರೇಬಿಯಾದ ವಿದೇಶಾಂಗ ಸಚಿವಾಲಯ ಮಂಗಳವಾರ ಬಿಡುಗಡೆಗೊಳಿಸಿರುವ ಹೇಳಿಕೆಯಲ್ಲಿ ಪೂರ್ವ ಜೆರೂಸಲೇಂ ನಲ್ಲಿ 1257 ಹೊಸ ವಸಾಹತು ಘಟಕಗಳನ್ನು ನಿರ್ಮಿಸಲು ಬಿಡ್ ಆಹ್ವಾನಿಸುವ ಇಸ್ರೇಲಿ ಅಧಿಕಾರಿಗಳ ತೀರ್ಮಾನದ ಕುರಿತು ಗಂಭೀರ ಕಳವಳ ವ್ಯಕ್ತಪಡಿಸಿದೆ.
ಇಸ್ರೇಲಿ ಭೂ ಪ್ರಾಧಿಕಾರವು ಗುತ್ತಿಗೆದಾರರಿಗೆ ನಿರ್ಮಾಣ ಟೆಂಡರ್ ಗಳನ್ನು ತೆರೆದಿದೆ ಎಂದು ರಾಯ್ಟರ್ಸ್ ಸೋಮವಾರ ವರದಿ ಮಾಡಿತ್ತು. ಫೆಲೆಸ್ತೀನ್ ಪ್ರಾಧಿಕಾರ, ಯುರೋಪ್ ಒಕ್ಕೂಟ ಮತ್ತು ವಿಶ್ವಸಂಸ್ಥೆ ಇಸ್ರೇಲ್ ನ ಈ ನಿರ್ಣಯವನ್ನು ಟೀಕಿಸಿದ್ದವು.