ಲಕ್ನೋ: ಧಾರ್ಮಿಕ ಸಾಮರಸ್ಯವನ್ನು ಘೋಷಿಸಿದ್ದಕ್ಕಾಗಿ ದೇವಾಲಯವೊಂದರಲ್ಲಿ ಸ್ನೇಹಿತನೊಡನೆ ನಮಾಝ್ ನಿರ್ವಹಿಸಿದ್ದಕ್ಕಾಗಿ ಯುಪಿ ಪೊಲೀಸರು ಬಂಧಿಸಿರುವ ಗಾಂಧಿಯನ್ ಕಾರ್ಯಕರ್ತ ಮತ್ತು ಹುದಾಯಿ ಹಿದ್ಮತ್‌ಗಡ್ ಸಂಘಟನೆಯ ರಾಷ್ಟ್ರೀಯ ಕನ್ವೀನರ್ ಫೈಸಲ್ ಖಾನ್ ಅವರನ್ನು ಬಿಡುಗಡೆ ಮಾಡಬೇಕೆಂದು ಹಿಂದೂ ಸಂಘಟನೆ ಒತ್ತಾಯಿಸಿದೆ. ಹಿಂದೂ ವಾಯ್ಸ್ ಫಾರ್ ಪೀಸ್ ಎಂಬ ಎನ್‌ಜಿಒ ಫೈಸಲ್‌ನನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದೆ.
ತನ್ನ ಸ್ನೇಹಿತ ಚಂದ್ ಮೊಹಮ್ಮದ್ ಅವರೊಂದಿಗೆ ಮಥುರಾದ ನಂದಾ ಬಾಬಾ ದೇವಸ್ಥಾನದಲ್ಲಿ ನಮಾಝ್ ನಿರ್ವಹಿಸಿದ್ದಕ್ಕಾಗಿ ಫೈಸಲ್‌ನನ್ನು ಯುಪಿ ಪೊಲೀಸರು ನವೆಂಬರ್ 2 ರಂದು ಬಂಧಿಸಿದ್ದರು. ಖಾನ್ ಸರ್ವಧರ್ಮದ ಸಾಮರಸ್ಯ ಮತ್ತು ಐಕ್ಯತೆಗಾಗಿ ವರ್ಷಗಳಿಂದ ದಣಿವರಿಯಿಲ್ಲದೆ ಕೆಲಸ ಮಾಡುತ್ತಿದ್ದಾರೆ ಎಂದು ಹಿಂದೂ ವಾಯ್ಸ್ ಫಾರ್ ಪೀಸ್ ಫೈಸಲ್ ಖಾನ್ ರ ಬಿಡುಗಡೆಗೆ ಒತ್ತಾಯಿಸಿದೆ.
ನವೆಂಬರ್ 1 ರಂದು ಮಥುರಾದ ಬರ್ಸಾನಾ ಪೊಲೀಸ್ ಠಾಣೆಯಲ್ಲಿ ನೋಂದಾಯಿಸಲಾದ ಎಫ್ಐಆರ್ ನಲ್ಲಿ ದೇವಾಲಯದ ಅರ್ಚಕರ ಅನುಮತಿಯೊಂದಿಗೆ ನಮಾಝ್ ನಿರ್ವಹಿಸಿದ್ದಾರೆ ಎಂದು ಉಲ್ಲೇಖಿಸಲಾಗಿತ್ತು.
ಆದರೆ, ಒತ್ತಡದಿಂದಾಗಿ ದೇವಾಲಯದ ಅರ್ಚಕರು ಅನುಮತಿ ನೀಡಿರುವುದನ್ನು ನಿರಾಕರಿಸಿರುವ ಸಾಧ್ಯತೆ ಇದೆ ಎಂದು ಸಂಘಟನೆಯ ವಕ್ತಾರ ಪವನ್ ಯಾದವ್ ಹೇಳಿದ್ದಾರೆ.