Home ಟಾಪ್ ಸುದ್ದಿಗಳು ಸೌದಿ ಅರೇಬಿಯಾದಲ್ಲಿ 12 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ

ಸೌದಿ ಅರೇಬಿಯಾದಲ್ಲಿ 12 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ

ರಿಯಾದ್; ಸೌದಿ ಅರೇಬಿಯಾದಲ್ಲಿ ಕೋವಿಡ್ ಲಸಿಕೆ ಅಭಿಯಾನವನ್ನು ಚುರುಕುಗೊಳಿಸಿರುವ ಸರ್ಕಾರ, ಫೈಝರ್ ಲಸಿಕೆಯನ್ನು ಪಡೆಯುವ ವಯಸ್ಸನ್ನು 12ಕ್ಕೆ ಇಳಿಸಿದೆ. ಭಾನುವಾರ ಈ ಸಂಬಂಧ ಅಲ್ಲಿನ ಆರೋಗ್ಯ ಇಲಾಖೆ ಅಧಿಸೂಚನೆ ಹೊರಡಿಸಿದೆ.
ಫೈಝರ್ ಲಸಿಕೆಯನ್ನು 18 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಬಳಸಲು ಡಿಸೆಂಬರ್ 2020 ರಲ್ಲಿ ಅಧಿಕಾರ ನೀಡಲಾಗಿತ್ತು.


ಈಗ 12 ರಿಂದ 18 ವರ್ಷದ ಮಕ್ಕಳಿಗೂ ಫೈಝರ್ ಲಸಿಕೆ ನೀಡಲು ಸೌದಿ ಆಹಾರ ಮತ್ತು ಔಷಧ ಪ್ರಾಧಿಕಾರ (ಎಸ್‌ಎಫ್‌ಡಿಎ) ನಿಯಮಗಳಿಗೆ ತಿದ್ದುಪಡಿ ತಂದಿದೆ.


ಲಸಿಕೆ ಹಾಕಿಸಿಕೊಳ್ಳಲು ಬಯಸುವವರು ಸೆಹತಿ ಮತ್ತು ತವಕಲ್ನಾ ಅರ್ಜಿಗಳ ಮೂಲಕ ಹೆಸರು ನೋಂದಾಯಿಸಿ ಕಾಯ್ದಿರಿಸಬಹುದು.
ಸೌದಿ ಅರೇಬಿಯಾದಾದ್ಯಂತ 587 ವ್ಯಾಕ್ಸಿನೇಷನ್ ಕೇಂದ್ರಗಳ ಮೂಲಕ ಇದುವರೆಗೆ 17.2 ಮಿಲಿಯನ್ ಲಸಿಕೆ ನೀಡಲಾಗಿದೆ ಎಂದು ಸಚಿವಾಲಯ ಹೇಳಿದೆ.

Join Whatsapp
Exit mobile version