Home ಗಲ್ಫ್ ವೈಯಕ್ತಿಕ ಡಾಟಾದ ಸಂರಕ್ಷಣೆಯನ್ನು ಖಾತರಿ ಪಡಿಸುವ ಕಾನೂನು ಅಂಗೀಕರಿಸಿದ ಸೌದಿ ಪ್ರಾಧಿಕಾರ

ವೈಯಕ್ತಿಕ ಡಾಟಾದ ಸಂರಕ್ಷಣೆಯನ್ನು ಖಾತರಿ ಪಡಿಸುವ ಕಾನೂನು ಅಂಗೀಕರಿಸಿದ ಸೌದಿ ಪ್ರಾಧಿಕಾರ

ರಿಯಾದ್: ವೈಯಕ್ತಿಕ ಗೌಪ್ಯತೆಯನ್ನು ಕಾಪಾಡುವ ಮತ್ತು ಡಾಟಾ ಆಧಾರಿತ ಡಿಜಿಜಲ್ ಆರ್ಥಿಕತೆ ಸೃಷ್ಟಿಸುವ ಗುರಿಯೊಂದಿರುವ ವೈಯಕ್ತಿಕ ಡಾಟಾ ಸಂರಕ್ಷಣಾ ಕಾನೂನಿಗೆ ಸೌದಿ ಕ್ಯಾಬಿನೆಟ್ ಅನುಮೋದನೆ ನೀಡಿದೆ. ಈ ಕಾಯ್ದೆ 180 ದಿನಗಳ ಬಳಿಕ ಜಾರಿಗೆ ಬರಲಿದೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.

ಸೌದಿ ಡಾಟಾ ಮತ್ತು ಎಐ ಪ್ರಾಧಿಕಾರ (ಎಸ್.ಡಿ.ಎ.ಐ.ಎ) ಅಧ್ಯಕ್ಷ ಅಬ್ದುಲ್ಲಾ ಬಿನ್ ಶರಫ್ ಅಲ್ ಘಾಮ್ದಿ ಅವರು ಡಿಜಿಟಲ್ ಪರಿವರ್ತನೆಯನ್ನು ವೃದ್ಧಿಸಲು ಮತ್ತು ಮಾಹಿತಿ ಆಧಾರಿತ ಸಮಾಜ ರಚನೆಗೆ ಈ ಕಾನೂನು ನೆರವಾಗುತ್ತದೆ ಎಂದು ತಿಳಿಸಿದರು.ಡಿಜಿಟಲ್ ಪರಿವರ್ತನೆಯಿಂದಾಗಿ ಖಾಸಗಿ ವಲಯ ಸಬಲೀಕರಣಗೊಳ್ಳುವುದರ ಜೊತೆಗೆ ವ್ಯಾಪಾರಕ್ಕೆ ಪೂರಕವಾದ ವಾತಾವರಣವನ್ನು ಸೃಷ್ಟಿಸುತ್ತದೆ ಮತ್ತು ವಿದೇಶಿ ಹೂಡಿಕೆಯನ್ನು ಆಕರ್ಷಿಸುತ್ತದೆ ಎಂದು ಅವರು ಹೇಳಿದರು.

ಈ ಕಾನೂನಿನ ಮೂಲಕ SDAIA , ರಾಷ್ಟ್ರೀಯ ತಂತ್ರ, ನೀತಿ, ಕಾರ್ಯ ವಿಧಾನಗಳನ್ನು ಅಭಿವೃದ್ಧಿಪಡಿಸುವ ಮತ್ತು ಅವುಗಳ ಅನುಷ್ಠಾನಕ್ಕೆ ಬೆಂಬಲ ನೀಡುವ ಮೂಲಕ ವೈಯಕ್ತಿಕ ಡಾಟಾವನ್ನು ಸಂರಕ್ಷಿಸಲು ಒತ್ತು ನೀಡಲಾಗುತ್ತದೆ.

Join Whatsapp
Exit mobile version