Home ಟಾಪ್ ಸುದ್ದಿಗಳು ವಾಯು ಮಾಲಿನ್ಯ ಭೀತಿ: ದೆಹಲಿಯಲ್ಲಿ ಸಂಪೂರ್ಣ ಪಟಾಕಿ ನಿಷೇಧ

ವಾಯು ಮಾಲಿನ್ಯ ಭೀತಿ: ದೆಹಲಿಯಲ್ಲಿ ಸಂಪೂರ್ಣ ಪಟಾಕಿ ನಿಷೇಧ

ನವದೆಹಲಿ: ಪಟಾಕಿ ಮಾರಾಟ ಮತ್ತು ಸಿಡಿಸುವುದನ್ನು ದೆಹಲಿಯಲ್ಲಿ ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಕಳೆದ ಮೂರು ವರ್ಷಗಳಿಂದ ರಾಷ್ಟ್ರ ರಾಜಧಾನಿಯಲ್ಲಿ ಮಾಲಿನ್ಯ ಪರಿಸ್ಥಿತಿ ನಿಯಂತ್ರಿಸುವ ದೃಷ್ಟಿಯಿಂದ ದೀಪಾವಳಿ ಸಂದರ್ಭದಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗುತ್ತಿದ್ದು, ಈ ನಿರ್ಧಾರದಿಂದ ಜನರ ಜೀವ ಉಳಿಸಬಹುದು ಎಂದು ಕೇಜ್ರಿವಾಲ್ ಹೇಳಿದ್ದಾರೆ.

ಕಳೆದ ವರ್ಷ ವ್ಯಾಪಾರಿಗಳು ಪಟಾಕಿಗಳನ್ನು ಸಂಗ್ರಹಿಸಿದ ನಂತರ ಮಾಲಿನ್ಯದ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು ಸಂಪೂರ್ಣ ನಿಷೇಧವನ್ನು ತಡವಾಗಿ ವಿಧಿಸಲಾಯಿತು ಇದು ವ್ಯಾಪಾರಿಗಳಿಗೆ ನಷ್ಟವನ್ನು ಉಂಟುಮಾಡಿತು. ಈ ಬಾರಿ ಸಂಪೂರ್ಣ ನಿಷೇಧದ ದೃಷ್ಟಿಯಿಂದ, ಯಾವುದೇ ರೀತಿಯ ಶೇಖರಣೆಯನ್ನು ಮಾಡಬೇಡಿ ಎಂದು ಎಲ್ಲ ವ್ಯಾಪಾರಿಗಳಿಗೆ ಮನವಿ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

Join Whatsapp
Exit mobile version