Home ಟಾಪ್ ಸುದ್ದಿಗಳು ಸತ್ಯೇಂದ್ರ ಜೈನ್ ಗೆ ಜೈಲಿನಲ್ಲಿ ಮಸಾಜ್ : ಸಿಸಿಟಿವಿ ವೀಡಿಯೊ ವೈರಲ್

ಸತ್ಯೇಂದ್ರ ಜೈನ್ ಗೆ ಜೈಲಿನಲ್ಲಿ ಮಸಾಜ್ : ಸಿಸಿಟಿವಿ ವೀಡಿಯೊ ವೈರಲ್

ನವದೆಹಲಿ: ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿದ್ದ ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ತಿಹಾರ್ ಜೈಲಿನಲ್ಲಿ ಮಸಾಜ್ ಮಾಡಿಸಿಕೊಳ್ಳುತ್ತಿರುವ ಸಿಸಿಟಿವಿ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಜೈನ್ ಯಾವುದೋ ಕಾಗದಪತ್ರಗಳನ್ನು ಓದುತ್ತಾ ಮಲಗಿದ್ದು, ಒಬ್ಬ ವ್ಯಕ್ತಿ ಅವರ ಕಾಲುಗಳಿಗೆ ಮಸಾಜ್ ಮಾಡುತ್ತಿರುವುದು ವೀಡಿಯೋದಲ್ಲಿ ಕಾಣಬಹುದು.

ಸತ್ಯೇಂದ್ರ ಜೈನ್ ಅವರಿಗೆ ತಿಹಾರ್ ಜೈಲಿನಲ್ಲಿ ವಿಶೇಷ ಆತಿಥ್ಯ ಲಭ್ಯವಾಗುತ್ತಿದೆ ಎಂಬ ಜಾರಿ ನಿರ್ದೇಶನಾಲಯ ಆರೋಪದ ಮೇರೆಗೆ ತಿಹಾರ್ ಜೈಲಿನ ಸೂಪರಿಂಟೆಂಡೆಂಟ್ ಅವರನ್ನು ಸೋಮವಾರ ಅಮಾನತು ಮಾಡಲಾಗಿತ್ತು. ಈ ಮಧ್ಯೆ ವೀಡಿಯೊ ಬಹಿರಂಗಗೊಂಡಿರುವುದು ಆರೋಪಕ್ಕೆ ಇಂಬು ನೀಡಿದಂತಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ಜೈನ್ ಫಿಸಿಯೋಥೆರಪಿಗೆ ಒಳಗಾಗುತ್ತಿದ್ದಾರೆ, ಇದನ್ನು ವಿವಿಐಪಿ ಚಿಕಿತ್ಸೆ ಎಂದು ಲೇಬಲ್ ಮಾಡಲು ಸಾಧ್ಯವಿಲ್ಲ. ಇದು ಕೇಸರಿ ಪಕ್ಷದ ಕೊಳಕು ರಾಜಕೀಯ ಉದಾಹರಣೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Join Whatsapp
Exit mobile version