Home ಟಾಪ್ ಸುದ್ದಿಗಳು ಬಿಜೆಪಿ ಸಂಸದನಿಗೆ ಚಪ್ಪಲಿಯಿಂದ ಥಳಿಸುವೆ ಎಂದ ಕೆಸಿಆರ್ ಮಗಳು

ಬಿಜೆಪಿ ಸಂಸದನಿಗೆ ಚಪ್ಪಲಿಯಿಂದ ಥಳಿಸುವೆ ಎಂದ ಕೆಸಿಆರ್ ಮಗಳು

ಹೈದರಾಬಾದ್: ಬಿಜೆಪಿಯ ಲೋಕಸಭಾ ಸದಸ್ಯ ಧರ್ಮಪುರಿ ಎಂಬವರಿಗೆ ತನ್ನ ಚಪ್ಪಲಿಯಿಂದ ಹಲ್ಲೆ ನಡೆಸುವುದಾಗಿ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರ ಮಗಳು, ಬಿ.ಆರ್.ಎಸ್ ಶಾಸಕಿ ತಿಳಿಸಿದ್ದಾರೆ. ತಮ್ಮ ಕುಟುಂಬಕ್ಕೆ ಅವಮಾನ, ತನ್ನ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡುತ್ತಿರುವ ಹಿನ್ನೆಲೆಯಲ್ಲಿ ಈ ರೀತಿಯ ಕ್ರಮಕ್ಕೆ ಮುಂದಾಗುವುದಾಗಿ ಅವರು ಗುಡುಗಿದ್ದಾರೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಬಿಜೆಪಿ ಪಕ್ಷದವರು ಆ ಪಕ್ಷಕ್ಕೆ ಸೇರ್ಪಡೆಯಾಗುವಂತೆ ನನ್ನನ್ನು ಸಂಪರ್ಕಿಸಿದ್ದರು. ಆದರೆ ಈ ಆಹ್ವಾನಕ್ಕೆ ಒಪ್ಪಿರಲಿಲ್ಲ ಎಂದು ತಿಳಿಸಿದರು.

ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪೋನ್ ಮಾಡಿರುವ ಕುರಿತು ನಿಝಾಮಾಬಾದ್ ಕ್ಷೇತ್ರದ ಬಿಜೆಪಿ ಸಂಸದ ಧರ್ಮಪುರಿ ಅರವಿಂದ್ ಅವರು ನೀಡಿರುವ ಹೇಳಿಕೆ ಸತ್ಯಕ್ಕೆ ದೂರವಾಗಿದೆ. ಇಂತಹ ಸುಳ್ಳಾರೋಪವನ್ನು ಹೊರಿಸುವುದು ಅವರು ತಕ್ಷಣ ನಿಲ್ಲಿಸಲಿ. ಇದನ್ನು ಮುಂದುವರಿಸಿದರೆ ಚಪ್ಪಲಿಯಿಂದ ಹಲ್ಲೆ ನಡೆಸಬೇಕಾಗುತ್ತದೆ ಎಂದು ಕವಿತಾ ಗುಡುಗಿದ್ದಾರೆ.

ಈ ಮಧ್ಯೆ ಕೆಸಿಆರ್ ಕುಟುಂಬಕ್ಕೆ ಅವಮಾನ ಮಾಡಿದ ರೀತಿಯಲ್ಲಿಯೇ ಕವಿತಾ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಬಿಜೆಪಿ ಸಂಸದ ಧರ್ಮಪುರಿ ಅರವಿಂದ್ ಅವರ ನಿವಾಸದ ಮೇಲೆ ಟಿ.ಆರ್.ಎಸ್. ಕಾರ್ಯಕರ್ತರು ದಾಳಿ ನಡೆಸಿ, ದಾಂಧಲೆ ಆರಂಭಿಸಿದ್ದರು ಎಂದು ಹೇಳಲಾಗಿದೆ.

Join Whatsapp
Exit mobile version