ಹುಬ್ಬಳ್ಳಿ: ಸರ್ದಾರ್ ವಲ್ಲಭಭಾಯಿ ಪಟೇಲ್ ಅವರೇ ಆರ್ ಎಸ್ ಎಸ್ ಅನ್ನು ಬ್ಯಾನ್ ಮಾಡಿದ್ದರು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾನು ಸುಳ್ಳು ಹೇಳುತಿಲ್ಲ, ಬೇಕಿದ್ದರೆ ಬಿಜೆಪಿಯವರನ್ನು ಕೇಳಿ. ದಾಖಲೆ ತೆಗದು ನೋಡಿ, ಸರ್ದಾರ್ ವಲ್ಲಭಭಾಯಿ ಪಟೇಲ್ ಅವರೇ ಆರ್ ಎಸ್ ಎಸ್ ಬ್ಯಾನ್ ಮಾಡಿದ್ದು. ಇದೀಗ ಅವರೇ ಸರ್ದಾರ್ ವಲ್ಲಭಭಾಯಿ ಪಟೇಲ್ ರ ಪ್ರತಿಮೆ ನಿರ್ಮಾಣ ಮಾಡಿದ್ದಾರೆ. ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪ್ರತಿಮೆ ನಿರ್ಮಾಣವಾಯ್ತು, ಮುಂದೇನು? ಇವರ ಸಿದ್ಧಾಂತವೆ ನನಗೆ ಅರ್ಥವಾಗುತಿಲ್ಲ. ಆರ್ ಎಸ್ ಎಸ್, ಬಿಜೆಪಿಯವರು ಯಾರ ಪರ ಇದ್ದಾರೋ? ಯಾರ ವಿರುದ್ಧ ಇದಾರೋ? ಅರ್ಥವಾಗುತ್ತಿಲ್ಲ ಎಂದರು.
ಪರೋಕ್ಷವಾಗಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರನ್ನು ಬಿಜೆಪಿಯವರು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ವಾಗ್ದಾಳಿ ಮಾಡಿದರು.