Home ಟಾಪ್ ಸುದ್ದಿಗಳು ಮಂಗಳೂರು: 25ನೇ ವಯಸ್ಸಿನಲ್ಲಿ ನ್ಯಾಯಾಧೀಶರಾದ ಅನಿಲ್ ಜಾನ್ ಸಿಕ್ವೇರಾ

ಮಂಗಳೂರು: 25ನೇ ವಯಸ್ಸಿನಲ್ಲಿ ನ್ಯಾಯಾಧೀಶರಾದ ಅನಿಲ್ ಜಾನ್ ಸಿಕ್ವೇರಾ

ಮಂಗಳೂರು: ಅನಿಲ್ ಜಾನ್ ಸಿಕ್ವೇರಾ ತನ್ನ 25ನೇ ವಯಸ್ಸಿನಲ್ಲೇ ನ್ಯಾಯಾಧೀಶರಾಗಿ ಆಯ್ಕೆಯಾಗುವ ಮೂಲಕ ರಾಜ್ಯದ ಅತ್ಯಂತ ಚಿಕ್ಕ ವಯಸ್ಸಿನ ನ್ಯಾಯಾಧೀಶ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.


ಬಂಟ್ವಾಳ ತಾಲೂಕಿನ ಬೋರಿಮಾರ್ ನ ಅನಿಲ್ ಜಾನ್ ಸಿಕ್ವೇರಾ, ಮಂಗಳೂರಿನ ಎಸ್ ಡಿಎಂ ಕಾನೂನು ಕಾಲೇಜಿನಲ್ಲಿ ಬಿಬಿಎಂ ಎಲ್ ಎಲ್ ಬಿ ಪದವಿ ಪಡೆದಿದ್ದಾರೆ.
ಅನಿಲ್ ಅವರು ದೀಪಕ್ ಡಿಸೋಜರ ಬಳಿ ಮಂಗಳೂರಿನಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಅನಿಲ್ ಜಾನ್ ಡಿಸೋಜ ಪರಿಶ್ರಮಿ. ಏಕಾಗ್ರತೆಯಿಂದ ಕಲಿತಿದ್ದಾರೆ. ಅವರ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ. ಇಂದು ತನ್ನ 25ನೆ ಹರೆಯದಲ್ಲಿ ನ್ಯಾಯಾಧೀಶರಾಗಿ ಆಯ್ಕೆಯಾಗಿರುವುದು ನಮಗೆ ಹೆಮ್ಮೆಯ ಸಂಗತಿಯಾಗಿದೆ ಎಂದು ಮಂಗಳೂರಿನ ನ್ಯಾಯವಾದಿ ದೀಪಕ್ ಡಿಸೋಜ ತಿಳಿಸಿದ್ದಾರೆ.

Join Whatsapp
Exit mobile version