Home ಟಾಪ್ ಸುದ್ದಿಗಳು ಪ್ರತಿಮೆ ನವೀಕರಣ ನೆಪದಲ್ಲಿ 40 ಲಕ್ಷ ಗುಳುಂ: ಸಂಘಪರಿವಾರದ ಯೂಟ್ಯೂಬರ್ ಕಾರ್ತಿಕ್ ಗೋಪಿನಾಥ್ ಬಂಧನ !

ಪ್ರತಿಮೆ ನವೀಕರಣ ನೆಪದಲ್ಲಿ 40 ಲಕ್ಷ ಗುಳುಂ: ಸಂಘಪರಿವಾರದ ಯೂಟ್ಯೂಬರ್ ಕಾರ್ತಿಕ್ ಗೋಪಿನಾಥ್ ಬಂಧನ !

ಚೆನ್ನೈ: ಸಾರ್ವಜನಿಕರಿಂದ ದೇವಾಲಯದ ಪ್ರತಿಮೆಗಳ ನವೀಕರಣಕ್ಕಾಗಿ 40 ಲಕ್ಷ ರೂಪಾಯಿಗಳನ್ನು ಸಂಗ್ರಹಿಸಿ ವಂಚನೆ ಮಾಡಿದ ಆರೋಪದ ಮೇಲೆ ಬಿಜೆಪಿ ಪರ ಯೂಟ್ಯೂಬರ್ ಎಸ್ ಕಾರ್ತಿಕ್ ಗೋಪಿನಾಥ್ ಎಂಬಾತನನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ.
ಗೋಪಿನಾಥ್ ಡಿಎಂಕೆ ಸರ್ಕಾರವನ್ನು ಟೀಕಿಸುವ ವೀಡಿಯೊಗಳಿಗೆ ಹೆಸರುವಾಸಿಯಾದ ಯೂಟ್ಯೂಬರ್. 2.08 ಲಕ್ಷ ಚಂದಾದಾರರೊಂದಿಗೆ ‘ಇಳಯ ಭಾರತಂ’ ಹೆಸರಿನ ಯೂಟ್ಯೂಬ್ ಚಾನೆಲ್ ಅನ್ನು ನಡೆಸುತ್ತಿದ್ದಾರೆ.
ಸಿರುವಾಚೂರಿನ ಅರುಲ್ಮಿಗು ಮಧುರ ಕಾಳಿಯಮ್ಮನ್ ತಿರುಕೋಯಿಲ್ನ ಕಾರ್ಯನಿರ್ವಾಹಕ ಅಧಿಕಾರಿ ಟಿ ಅರವಿಂದನ್ ಅವರ ದೂರಿನ ಆಧಾರದ ಮೇಲೆ, ಸೈಬರ್ ಕ್ರೈಂ ಸೆಲ್ ಐಪಿಸಿ ಸೆಕ್ಷನ್ 406 (ಕ್ರಿಮಿನಲ್ ನಂಬಿಕೆ ಉಲ್ಲಂಘನೆ), 420 (ವಂಚನೆ) ಮತ್ತು ಐಟಿ ಕಾಯ್ದೆ ಸೆಕ್ಷನ್ 66 (ಡಿ) (ವಂಚನೆ) ಅಡಿಯಲ್ಲಿ ಪ್ರಕರಣ ದಾಖಲಿಸಿದೆ. ಸೋಮವಾರ ಆತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Join Whatsapp
Exit mobile version