Home ಟಾಪ್ ಸುದ್ದಿಗಳು ಹಾಸನ: ಶಿಕ್ಷಕಿಯರಿಬ್ಬರ ಜಗಳ; ಬೇಸತ್ತ ಪೋಷಕರಿಂದ ಮಕ್ಕಳ ಟಿ.ಸಿ ಗಾಗಿ ಪ್ರತಿಭಟನೆ

ಹಾಸನ: ಶಿಕ್ಷಕಿಯರಿಬ್ಬರ ಜಗಳ; ಬೇಸತ್ತ ಪೋಷಕರಿಂದ ಮಕ್ಕಳ ಟಿ.ಸಿ ಗಾಗಿ ಪ್ರತಿಭಟನೆ

ಸಕಲೇಶಪುರ: ಶಿಕ್ಷಕಿಯರಿಬ್ಬರ ಜಗಳದಿಂದ ಬೇಸತ್ತ ಪೋಷಕರು, ತಮ್ಮ ಮಕ್ಕಳ ಟಿ ಸಿ ಗಾಗಿ  ಪ್ರತಿಭಟನೆ ನಡೆಸಿದ ಘಟನೆ ಯಸಳೂರು ಹೋಬಳಿಯ ಕೆರೊಡಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ‌ ನಡೆದಿದೆ.

ಪ್ರಸ್ತುತ  ಶಾಲೆಯಲ್ಲಿಹಲವು ವರ್ಷಗಳಿಂದ ಅಧ್ಯಾಪಕಿಯರಾಗಿರುವ  ಗೀತಾಂಜಲಿ ಮತ್ತು ಸಂಧ್ಯಾ  ಅಡುಗೆ ಪಾತ್ರೆ ಹಾಗೂ ಸೌಟು ಹಿಡಿದು ಹೊಡೆದಾಡಿಕೊಂಡಿದ್ದನ್ನು ಮಕ್ಕಳು ಪೋಷಕರಿಗೆ ತಿಳಿಸಿದ್ದರು. ಆ ಬಗ್ಗೆ ವಿಚಾರಿಸಲು ಬಂದ ಪೋಷಕರೊಂದಿಗೂ ಶಿಕ್ಷಕಿಯರು ಜಗಳವಾಡಿದ್ದರು ಎನ್ನಲಾಗಿದೆ.

ಕ್ಷೇತ್ರ ಶಿಕ್ಷಣಾಧಿಕಾರಿಗೆ ದೂರು ನೀಡಿದರೂ ಪ್ರಯೋಜನವಾಗದ ಕಾರಣ ಗ್ರಾಮಸ್ಥರು ಪಂಚಾಯಿತಿಗೆ ದೂರು ನೀಡಿದ್ದರು.  ಗ್ರಾಮ ಪಂಚಾಯಿತಿ ಮುಖಂಡರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ  ಪೋಷಕರು–ಶಿಕ್ಷಕಿಯರ ನಡುವೆ ಮತ್ತೆ ವಾಗ್ವಾದ ನಡೆದಿದೆ.  ಈ ವೇಳೆ ‘ಶಿಕ್ಷಕಿಯರನ್ನು ವರ್ಗಾಯಿಸಬೇಕು ಅಥವಾ  ಮಕ್ಕಳ ಟಿ.ಸಿ.ಕೊಡಬೇಕು’ ಎಂದು ಪೋಷಕರು ಆಗ್ರಹಿಸಿದರು.

‘ಶಿಕ್ಷಕಿಯರು ತಮ್ಮ ವೈಯುಕ್ತಿಕ ವಿಷಯಗಳಿಗಾಗಿ ಶಾಲೆಯಲ್ಲಿ ಮಕ್ಕಳ ಮುಂದೆ ಜಗಳವಾಡುವುದರಿಂದ ಶೈಕ್ಷಣಿಕ ಬೆಳವಣಿಗೆಗೆ ಅಡ್ಡಿಯುಂಟಾಗುತ್ತದೆ. ಹೀಗಾಗಿ ಇಬ್ಬರನ್ನೂ ಕೂಡಲೇ ಅಮಾನತು ಮಾಡಬೇಕು’ ಎಂದು ಎಸ್‌ಡಿಎಂಸಿ ಅಧ್ಯಕ್ಷೆ ಭವ್ಯಕುಮಾರ ಒತ್ತಾಯಿಸಿದ್ದಾರೆ.

ಈ ಬಗ್ಗೆ ಶಾಸಕರಿಗೆ ಹಾಗೂ ಶಿಕ್ಷಣಾಧಿಕಾರಿಗೆ ದೂರು ನೀಡಲಾಗಿದೆ’ ಎಂದು ಪಂಚಾಯಿತಿ ಅಧ್ಯಕ್ಷ ಹರ್ಷ ತಿಳಿಸಿದರು.

Join Whatsapp
Exit mobile version