Home ಟಾಪ್ ಸುದ್ದಿಗಳು ಕಲಬುರಗಿ ರೈಲು ನಿಲ್ದಾಣಕ್ಕೆ ಹಸಿರು ಬಣ್ಣ ಬಳಿದಿದ್ದಕ್ಕೆ ಸಂಘಪರಿವಾರ ಕೆಂಗಣ್ಣು

ಕಲಬುರಗಿ ರೈಲು ನಿಲ್ದಾಣಕ್ಕೆ ಹಸಿರು ಬಣ್ಣ ಬಳಿದಿದ್ದಕ್ಕೆ ಸಂಘಪರಿವಾರ ಕೆಂಗಣ್ಣು

ಕಲಬುರಗಿ: ನಗರದ ರೈಲು ನಿಲ್ದಾಣಕ್ಕೆ ಹಸಿರು ಬಣ್ಣ ಬಳಿದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಹಿಂದುತ್ವ ಸಂಘಟನೆಗಳು ನಿಲ್ದಾಣದ ಬಣ್ಣ ಬದಲಿಸಬೇಕೆಂದು ಒತ್ತಾಯಿಸಿ ಮಂಗಳವಾರ ರೈಲ್ವೆ ನಿಲ್ದಾಣದ ಮುಂದೆ ಪ್ರತಿಭಟನೆ ನಡೆಸಿದ ವಿಚಿತ್ರ ಘಟನೆ ನಡೆದಿದೆ.

ಇತ್ತೀಚಿಗೆ ರೈಲ್ವೆ ಅಧಿಕಾರಿಗಳು ರೈಲ್ವೆ ನಿಲ್ದಾಣದ ಗೋಡೆಗಳಿಗೆ ಹಸಿರು ಬಣ್ಣ ಬಳಿದಿದ್ದರು. ಇದರಿಂದ ಆಕ್ರೋಶಿತಗೊಂಡಿರುವ ಹಿಂದುತ್ವಪರ ಸಂಘಟನೆಗಳು ಹಸಿರು ಬಣ್ಣವನ್ನು ತಕ್ಷಣ ತೆಗೆದುಹಾಕುವಂತೆ ಒತ್ತಾಯಿಸಿ ಪ್ರತಿಭಟಿಸಿದ್ದಾರೆ.

ರೈಲ್ವೆ ನಿಲ್ದಾಣದ ಮಧ್ಯದ ರಚನೆಯು ಗುಮ್ಮಟದ ಆಕಾರದಲ್ಲಿದೆ. ಆದ್ದರಿಂದ ಇದು ಮಸೀದಿಯಂತೆ ಕಾಣುತ್ತದೆ ಎಂದು ಹಿಂದೂ ಸಂಘಟನೆಗಳು ಆರೋಪಿಸಿದ್ದು, ಅದನ್ನೂ ತೆರವುಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.

ಸಂಘಪರಿವಾರದಿಂದ ಒತ್ತಡ ಹೆಚ್ಚಾದ ಪರಿಣಾಮ ರೈಲ್ವೆ ಅಧಿಕಾರಿಗಳು ನಿಲ್ದಾಣದ ಬಣ್ಣವನ್ನು ಬದಲಿಸಲು ಕ್ರಮಕೈಗೊಂಡಿದ್ದಾರೆ. ಹಸಿರು ಬಣ್ಣದ ಮೇಲೆ ಮತ್ತೆ ಬಿಳಿ ಪೈಂಟ್ ಬಳಿಯಲು ಕಾರ್ಮಿಕರಿಗೆ ಸೂಚಿಸಿದ್ದಾರೆ.

ಸಂಘಪರಿವಾರದ ಈ ಆಟಾಟೋಪಕ್ಕೆ ರೈಲ್ವೆ ಅಧಿಕಾರಿಗಳು ಕಂಗಾಲಾಗಿದ್ದಾರೆ.

Join Whatsapp
Exit mobile version