Home Uncategorized ಕೊಡಗು | ಕೃಷಿ ಮೇಳದಲ್ಲೂ ಮುಸ್ಲಿಮರ ವ್ಯಾಪಾರಕ್ಕೆ ಅಡ್ಡಿ: ಅಂಗಡಿ ತೆರವುಗೊಳಿಸಿದ ಸಂಘಪರಿವಾರ

ಕೊಡಗು | ಕೃಷಿ ಮೇಳದಲ್ಲೂ ಮುಸ್ಲಿಮರ ವ್ಯಾಪಾರಕ್ಕೆ ಅಡ್ಡಿ: ಅಂಗಡಿ ತೆರವುಗೊಳಿಸಿದ ಸಂಘಪರಿವಾರ

ಮಡಿಕೇರಿ: ಮುಸ್ಲಿಂ ಸಮುದಾಯದವರು ಇಲ್ಲಿ ನಡೆಯುತ್ತಿದ್ದ ಕೃಷಿ ಮೇಳದಲ್ಲಿ ಹಾಕಿದ್ದ ಮಳಿಗೆಯನ್ನು ಸಂಘಪರಿವಾರದ ಕಾರ್ಯಕರ್ತರು ತೆರವುಗೊಳಿಸಿದ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಶನಿವಾರಸಂತೆಯ ಮನೆಹಳ್ಳಿ ಮಠದಲ್ಲಿ ನಡೆದಿದೆ.


ಮನೆಹಳ್ಳಿ ಮಠದಲ್ಲಿ ರಾಜ್ಯಮಟ್ಟದ ಸಾವಯವ ಕೃಷಿ ಮತ್ತು ಕುಲಗೋವುಗಳ ಸಮ್ಮೇಳನ ನಡೆಯುತ್ತಿತ್ತು. ಮುಸ್ಲಿಮ್ ವ್ಯಾಪಾರಿಗಳು ವ್ಯಾಪಾರ ವಹಿವಾಟು ನಡೆಸುತ್ತಿರುವ ಸಂದರ್ಭದಲ್ಲಿ ಸಮ್ಮೇಳನದಲ್ಲಿ ಇದ್ದ ಸಂಘಪರಿವಾರದ ಕಾರ್ಯಕರ್ತರು ಮುಸ್ಲಿಂ ಸಮುದಾಯದವರು ವ್ಯಾಪಾರಕ್ಕೆ ಹಾಕಿದ ಅಂಗಡಿ ಖಾಲಿ ಮಾಡಿಸಿದ್ದಾರೆ. ಅಲ್ಲದೇ ಗೋವುಗಳ ಕಡಿದು ತಿನ್ನುವ ಅವರು ಗೋ ಸಮ್ಮೇಳನಕ್ಕೆ ಯಾಕೆ ಬರಬೇಕು. ಗೋವುಗಳ ಕಡಿದು ತಿನ್ನುವವರಿಗೆ ಇಲ್ಲಿ ವ್ಯಾಪಾರ ಮಾತ್ರ ಬೇಕಾ ಎಂದು ನಿಂದಿಸಿದ್ದಾರೆ. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ.

https://prasthutha.com/wp-content/uploads/2022/03/WhatsApp-Video-2022-03-25-at-6.30.36-PM.mp4

Join Whatsapp
Exit mobile version