ಬೆಂಗಳೂರು: ತಮಿಳುನಾಡಿನ ಸಚಿವ ಉದಯನಿಧಿ ಸ್ಟಾಲಿನ್ ಅವರು “ಸನಾತನ ಧಮ೯ದ ನಿಮೂ೯ಲನೆಯ ಅಗತ್ಯ” ದ ಇಂಗಿತವನ್ನು ಪ್ರಕಟಿಸಿದ್ದಾರೆ. ಇದು ಭಾರತದ ಬಹು ಜನರ ಅದರಲ್ಲೂ ಜಾತಿಯ ತುಳಿತ ಹಾಗೂ ಧಮ೯ದ ದಬ್ಬಾಳಿಕೆಗೆ ಗುರಿಯಾದ ದಮನಿತ ಜನರ ಮನದಾಳದ ಮಾತಾಗಿದೆ. ಸ್ಟಾಲಿನ್ ಅವರ ಹೇಳಿಕೆಯನ್ನು ಟ್ರೇಡ್ ಯೂನಿಯನ್ ಸೆಂಟರ್ ಆಫ್ ಇಂಡಿಯಾ (TUCI) ಕೇಂದ್ರ ಸಮನ್ವಯ ಸಮಿತಿ ಸಮಥಿ೯ಸಿದೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ಪ್ರಕಟಿಸಿರುವ ಟ್ರೇಡ್ ಯೂನಿಯನ್ ಸೆಂಟರ್ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ಆರ್. ಮಾನಸಯ್ಯ ಸನಾತನವಾದವು ಜಾತಿ ತಾರತಮ್ಯ,ಲಿಂಗ ತಾರತಮ್ಯ ಹಾಗೂ ಸಂಪತ್ತಿನ ಅಸಮಾನತೆ ಯನ್ನು ಪ್ರತಿಪಾದಿಸುತ್ತದೆ.ದುಡಿಮೆಯನ್ನು ಪಾಪ ಎಂದು ಸಾರುತ್ತದೆ. ಅಧಿಕಾರ ಹಾಗೂ ಸಂಪತ್ತಿಗೆ ಯಾವತ್ತೂ ಮೇಲ್ಜಾತಿಯರೆ ಒಡೆಯರಾಗಿರ ಬೇಕೆಂದು ಹೇಳುತ್ತದೆ. ದಲಿತರು,ದುಡಿಮೆಗಾರರು ಹಾಗೂ ಮಹಿಳೆಯರಿಗೆ ಸ್ವಾತಂತ್ರ್ಯ ಇರ ಬಾರದೆಂಬ ಸಿದ್ದಾಂತ ಇದರದ್ದಾಗಿದೆ.
ಭಾರತದ ಸಂವಿಧಾನ ಹೇಳುವ ಸ್ವಾತಂತ್ರ್ಯ ಸಮಾನತೆ , ಸಹೋದರತೆ,ಜಾತ್ಯಾತೀತೆಗಳನ್ನು ಸನಾತನವಾದಿಗಳು ಸಂಪೂಣ೯ ತಿರಸ್ಕರಿಸುತ್ತಾರೆ.ಸನಾತನಾವಾದದ ಆಧಾರದ ಮೇಲೆ ಅವರು ಹಿಂದುರಾಷ್ಟ್ರ ನಿಮಾ೯ಣಕ್ಕೆ ಹೊರಟಿದ್ದಾರೆ.ಜಮ್ಮು – ಕಾಶ್ಮೀರ,ಮಣಿಪುರಗಳ ಮಾದರಿ ನಮ್ಮ ಕಣ್ಮುಂದಿದೆ. ಒಂದೇ ರಾಷ್ಟ ಒಂದೇ ಧಮ೯,ಒಂದೇ ರಾಷ್ಟ್ರ ಒಂದೇ ಪೊಲೀಸ್ ಹಾಗೂ ಒಂದೇ ರಾಷ್ಟ್ರ ಒಂದೇ ಚುನಾವಣೆಯ ಮೂಲಕ ಭಾರತದ ಬಹು ಸಂಸ್ಕೃತಿ ಹಾಗೂ ಗಣತಂತ್ರದ ಮೇಲೆ ಸಂಘ ಪರಿವಾರದ ದಬ್ಬಾಳಿಕೆಯು ನಿರಂತರವಾಗಿ ಮುಂದುವರೆದಿದೆ.
ಇದನ್ನು ಪ್ರಶ್ನಿಸಿದರೆ ದೇಶದ್ರೋಹಿ ಪಟ್ಟ ಕಟ್ಟಿ ಜೈಲಿಗೆ ತಳ್ಳಲಾಗುತ್ತಿದೆ.ಇಂಥಹ ಫ್ಯಾಸಿಸ್ಟ್ ದಮನ ದಬ್ಬಾಳಿಕೆಗೆ ಸನಾತನವಾದವೆ ಮುಖ್ಯ ಆಧಾರವಾಗಿದೆ.ಇಂದು ಅಂತರಾಷ್ಟ್ರೀಯ ಹಣಕಾಸು ಬಂಡವಾಳದೊಂದಿಗೆ ಸೇರಿಕೊಂಡು ,ದೇಶದ ಶ್ರಮಶಕ್ತಿ ಹಾಗೂ ಪ್ರಕೃತಿ ದತ್ತ ಸಂಪನ್ಮೂಲಗಳ ಲೂಟಿಗೆ ಈ ಸನಾತನವಾದಿಗಳೆ ಮುಂದೆ ನಿಂತಿದ್ದಾರೆ.
ಹಾಗಾಗಿ,ದೇಶದ ದುಡಿಯುವ ಜನರು ಹಾಗೂ ದಮನಿತ ಜನಾಂಗಗಳು ಮತ್ತು ಪ್ರಜಾಪ್ರಭುತ್ವಾದಿಗಳು ಈ ಸನಾತನವಾದಿಗಳ ನಿಮೂ೯ಲನೆಗಾಗಿ ಪಣ ತೊಡ ಬೇಕಾಗಿದೆ. ಇದಕ್ಕಾಗಿ ಮತ್ತೊಮ್ಮೆ ಅತೀ ದೊಡ್ಡ ಸಾಂಸ್ಕೃತಿಕ ರಾಜಕೀಯ ಚಳುವಳಿಗೆ ಮುಂದಾಗ ಬೇಕಾಗಿದೆ.