Home ಟಾಪ್ ಸುದ್ದಿಗಳು ಸಮಾನ ಹಕ್ಕುಗಳನ್ನು ನೀಡದ ಯಾವುದೇ ಧರ್ಮವು ರೋಗವಿದ್ದಂತೆ: ಪ್ರಿಯಾಂಕ ಖರ್ಗೆ

ಸಮಾನ ಹಕ್ಕುಗಳನ್ನು ನೀಡದ ಯಾವುದೇ ಧರ್ಮವು ರೋಗವಿದ್ದಂತೆ: ಪ್ರಿಯಾಂಕ ಖರ್ಗೆ

ಬೆಂಗಳೂರು: ತಮಿಳುನಾಡಿನ ಸಚಿವ ಉದಯ್ ನಿಧಿ ಸ್ಟಾಲಿನ್ ಅವರು ನೀಡಿರುವ ಸನಾತನ ಧರ್ಮದ ಕುರಿತ ಹೇಳಿಕೆಗೆ ಗ್ರಾಮೀಣಾಭಿವೃದ್ಧಿ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ ಖರ್ಗೆ ಬೆಂಬಲವನ್ನು ಸೂಚಿಸಿದ್ದಾರೆ.


ಉದಯ್ ನಿಧಿ ಹೇಳಿಕೆ ಕುರಿತ ವಿವಾದದ ಬಗ್ಗೆ ಮಾದ್ಯಮಗಳ ಜೊತೆ ಮಾತನಾಡಿದ ಪ್ರಿಯಾಂಕ ಖರ್ಗೆ, ಸಮಾನ ಹಕ್ಕುಗಳನ್ನು ನೀಡದ ಯಾವುದೇ ಧರ್ಮವು ರೋಗವಿದ್ದಂತೆ ಎಂದು ಹೇಳಿದ್ದಾರೆ.


ಸಮಾನತೆಯನ್ನು ಉತ್ತೇಜಿಸದ ಅಥವಾ ಮಾನವರಾಗಿ ನಿಮಗೆ ಇರುವ ಘನತೆಯನ್ನು ಖಾತ್ರಿಪಡಿಸದ ಯಾವುದೇ ಧರ್ಮವು ಧರ್ಮವಲ್ಲ. ನನ್ನ ಪ್ರಕಾರ, ಸಮಾನ ಹಕ್ಕುಗಳನ್ನು ನೀಡದ ಮತ್ತು ನಿಮ್ಮನ್ನು ಮನುಷ್ಯರಂತೆ ನೋಡಿಕೊಳ್ಳದ ಯಾವುದೇ ಧರ್ಮ ಅದು ಕಾಯಿಲೆಯಂತೆ ಎಂದು ಹೇಳಿದ್ದಾರೆ.

Join Whatsapp
Exit mobile version