Home ಟಾಪ್ ಸುದ್ದಿಗಳು ಸೈಫ್ ಅಲಿ ಖಾನ್ ಕಸ, ಅದನ್ನು ಎಸೆಯಬೇಕು: ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ

ಸೈಫ್ ಅಲಿ ಖಾನ್ ಕಸ, ಅದನ್ನು ಎಸೆಯಬೇಕು: ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ

►‘ಹಿಂದೂ ನಟ ಚಿತ್ರಹಿಂಸೆಗೊಳಗಾದಾಗ ಯಾರೂ ಏನನ್ನೂ ಹೇಳಲು ಮುಂದೆ ಬರುವುದಿಲ್ಲ’


ಪುಣೆ: ಚಾಕು ಇರಿತದಿಂದ ಚೇತರಿಸಿಕೊಂಡು ಐದು ದಿನಗಳ ಬಳಿಕ ಆಸ್ಪತ್ರೆಯಿಂದ ಮನೆಗೆ ವಾಪಾಸ್ಸಾಗಿರುವ ಬಾಲಿವುಡ್ ನಟ ಸೈಫ್ ಅಲಿ ಖಾನ್ ವಿರುದ್ಧ ಮಹಾರಾಷ್ಟ್ರದ ಸಚಿವ ನಿತೇಶ್ ರಾಣೆ ವಾಗ್ಧಾಳಿ ನಡೆಸಿದ್ದಾರೆ.


‘ಬಹುಶಃ ಅವನು(ಚಾಕು ಇರಿದ ಆರೋಪಿ) ಅವರನ್ನು (ಸೈಫ್) ಕರೆದುಕೊಂಡು ಹೋಗಲು ಬಂದಿರಬಹುದು. ಇದು ಒಳ್ಳೆಯದೇ.. ಕಸವನ್ನು ಎಸೆಯಬೇಕು’ ಎಂದು ರಾಣೆ ಹೇಳಿದ್ದಾರೆ.


‘ಮುಂಬೈನಲ್ಲಿ ಬಾಂಗ್ಲಾದೇಶಿಗಳು ಏನು ಮಾಡುತ್ತಿದ್ದಾರೆ ನೋಡಿ. ಅವರು ಸೈಫ್ ಅಲಿ ಖಾನ್ ಅವರ ಮನೆಗೆ ನುಗ್ಗಿದ್ದಾರೆ. ಮೊದಲು ರಸ್ತೆಯ ಕ್ರಾಸಿಂಗ್ ಗಳಲ್ಲಿ ನಿಲ್ಲುತ್ತಿದ್ದ ಅವರು ಈಗ ಮನೆಗಳಿಗೆ ಪ್ರವೇಶಿಸಲು ಪ್ರಾರಂಭಿಸಿದ್ದಾರೆ’ ಎಂದು ರಾಣೆ ಹೇಳಿದ್ದಾರೆ.


‘ಅವರು(ಸೈಫ್) ಆಸ್ಪತ್ರೆಯಿಂದ ಹೊರಗೆ ಬರುವುದನ್ನು ನೋಡಿದರೆ ಅವರಿಗೆ ನಿಜವಾಗಿಯೂ ಚಾಕುವಿನಿಂದ ಗಾಯವಾಗಿದೆಯಾ? ಅಥವಾ ನಟಿಸುತ್ತಿದ್ದಾರಾ? ಎಂಬ ಅನುಮಾನ ಬಂತು. ನಡೆಯುವಾಗ ಅವರು ನೃತ್ಯ ಮಾಡುತ್ತಿದ್ದರು’ ಎಂದು ಅನುಮಾನ ಹೊರಹಾಕಿದ್ದಾರೆ.


‘ಶಾರುಖ್ ಖಾನ್, ಸೈಫ್ ಅಲಿ ಖಾನ್ ಅವರಂತಹ ‘ಖಾನ್’ಗಳು ಗಾಯಗೊಂಡಾಗ ಎಲ್ಲರೂ ಅದರ ಬಗ್ಗೆ ಮಾತನಾಡಲು ಪ್ರಾರಂಭಿಸುತ್ತಾರೆ. ಸುಶಾಂತ್ ಸಿಂಗ್ ರಜಪೂತ್ ಅವರಂತಹ ಹಿಂದೂ ನಟ ಚಿತ್ರಹಿಂಸೆಗೊಳಗಾದಾಗ ಯಾರೂ ಏನನ್ನೂ ಹೇಳಲು ಮುಂದೆ ಬರುವುದಿಲ್ಲ’ ಎಂದು ಕಿಡಿಕಾರಿದ್ದಾರೆ.

Join Whatsapp
Exit mobile version