Home ಟಾಪ್ ಸುದ್ದಿಗಳು ಬಾಲಿವುಡ್’ನ ನಾಲ್ವರು ಸೆಲೆಬ್ರಿಟಿಗಳಿಗೆ ಜೀವ ಬೆದರಿಕೆ: FIR ದಾಖಲು

ಬಾಲಿವುಡ್’ನ ನಾಲ್ವರು ಸೆಲೆಬ್ರಿಟಿಗಳಿಗೆ ಜೀವ ಬೆದರಿಕೆ: FIR ದಾಖಲು

ಮುಂಬೈ: ಬಾಲಿವುಡ್ ನಟ ಕಪಿಲ್ ಶರ್ಮಾ, ರಾಜ್ಪಾಲ್ ಯಾದವ್ ಅವರಿಗೆ ಜೀವ ಬೆದರಿಕೆ ಇ-ಮೇಲ್ ಬಂದಿರುವುದಾಗಿ ವರದಿಯಾಗಿದೆ.


ಹಾಸ್ಯ ನಟ ಕಪಿಲ್ ಶರ್ಮಾ, ನಟ ರಾಜ್ ಪಾಲ್ ಯಾದವ್, ಗಾಯಕಿ ಸುಗಂಧ ಮಿಶ್ರಾ ಮತ್ತು ನೃತ್ಯ ನಿರ್ದೇಶಕ ರೆಮೋ ಡಿಸೋಜಾ ಅವರಿಗೆ ಬೆದರಿಕೆ ಸಂದೇಶ ಬಂದಿದ್ದು, ಈ ಕುರಿತು ಅಪರಿಚಿತ ವ್ಯಕ್ತಿಯ ವಿರುದ್ಧ ಬಿಎನ್ ಎಸ್ ನ ಸೆಕ್ಷನ್ 351(3) ಅಡಿಯಲ್ಲಿ ಮಹಾರಾಷ್ಟ್ರದ ಅಂಬೋಲಿ ಪೊಲೀಸರು ಎಫ್ ಐಆರ್ ದಾಖಲಿಸಿಕೊಂಡಿದ್ದಾರೆ.


‘ವಿಷ್ಣು ಹೆಸರಿನ ವ್ಯಕ್ತಿಯಿಂದ ಇ –ಮೇಲ್ ಸಂದೇಶವಿದೆ. ರಾಜ್ಪಾಲ್, ಕಪಿಲ್ ಶರ್ಮಾ ಮತ್ತು ಆತನ ಕುಟುಂಬ ಸದಸ್ಯರನ್ನು ಕೊಲೆ ಮಾಡುವುದಾಗಿ ಮೇಲ್ನಲ್ಲಿ ಸಂದೇಶವನ್ನು ಕಳುಹಿಸಿದ್ದಾರೆ’ ಎಂದು ಪೊಲೀಸರ ತಿಳಿಸಿರುವುದಾಗಿ ವರದಿಯಾಗಿದೆ.

Join Whatsapp
Exit mobile version