Home ಟಾಪ್ ಸುದ್ದಿಗಳು ಉಕ್ರೇನ್‍ನ ಮೇಲಿನ ಯುದ್ಧವನ್ನು ಟೀಕಿಸಿ ಬರೆದಿದ್ದ ರಷ್ಯಾದ ಸುದ್ದಿ ಸಂಪಾದಕರಿಗೆ 8 ವರ್ಷಗಳ ಜೈಲುಶಿಕ್ಷೆ

ಉಕ್ರೇನ್‍ನ ಮೇಲಿನ ಯುದ್ಧವನ್ನು ಟೀಕಿಸಿ ಬರೆದಿದ್ದ ರಷ್ಯಾದ ಸುದ್ದಿ ಸಂಪಾದಕರಿಗೆ 8 ವರ್ಷಗಳ ಜೈಲುಶಿಕ್ಷೆ

ಮಾಸ್ಕೋ: ಉಕ್ರೇನ್‍ನ ಮೇಲೆ ರಷ್ಯಾ ನಡೆಸುತ್ತಿರುವ ಯುದ್ಧವನ್ನು ಟೀಕಿಸಿ ಲೇಖನ ಬರೆದಿದ್ದ ರಶ್ಯದ ಸುದ್ದಿ ಸಂಪಾದಕರೊಬ್ಬರಿಗೆ ಅಲ್ಲಿನ‌ ನ್ಯಾಯಾಲಯ 8 ವರ್ಷಗಳ ಜೈಲುಶಿಕ್ಷೆ ವಿಧಿಸಿದೆ.

‘ಲಿಸ್ಟೋಕ್’ ಎಂಬ ಸಾಮಾಜಿಕ ಮಾಧ್ಯಮದ ಸುದ್ದಿಸಂಪಾದಕ ಸೈಬೀರಿಯಾದ ಅಲ್ಟಾಯ್ ಪ್ರಾಂತದ ಸೆರ್ಗೆಯ್ ಮಿಖೈಲೊವ್ ರಷ್ಯಾದ ಯುದ್ಧದಾಹವನ್ನು ಟೀಕಿಸಿ ಪೋಸ್ಟ್ ಮಾಡಿದ್ದರು. ಉಕ್ರೇನ್ ರಾಜಧಾನಿ ಕೀವ್‍ನ ಹೊರವಲಯದ ಬುಚಾ ಮತ್ತು ಮರಿಯುಪೋಲ್‍ನಲ್ಲಿ ನಾಗರಿಕರ ಸಾವಿನ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಇದಕ್ಕಾಗಿ ಅವರನ್ನು 2022ರಲ್ಲಿ ಬಂಧಿಸಲಾಗಿತ್ತು. ರಶ್ಯದ ಸೇನೆಯ ವಿರುದ್ಧ ಉದ್ದೇಶಪೂರ್ವಕ ಅಪಪ್ರಚಾರ ಮಾಡುತ್ತಿರುವ ಆರೋಪದಲ್ಲಿ, ಉಕ್ರೇನ್‍ನಲ್ಲಿ ರಶ್ಯದ ಕಾರ್ಯಾಚರಣೆಯ ಕುರಿತ ಟೀಕೆಯನ್ನು ನಿಷೇಧಿಸುವ ಕಾನೂನಿನಡಿ ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ 8 ವರ್ಷಗಳ ಜೈಲುಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ.

Join Whatsapp
Exit mobile version