Home ಟಾಪ್ ಸುದ್ದಿಗಳು ರಷ್ಯಾ-ಉಕ್ರೇನ್ ಕದನ: ಉಕ್ರೇನ್ ನ ಚೆರ್ನೋಬಿಲ್ ಪರಮಾಣು ವಿದ್ಯುತ್ ಸ್ಥಾವರ ವಶ

ರಷ್ಯಾ-ಉಕ್ರೇನ್ ಕದನ: ಉಕ್ರೇನ್ ನ ಚೆರ್ನೋಬಿಲ್ ಪರಮಾಣು ವಿದ್ಯುತ್ ಸ್ಥಾವರ ವಶ

ಕೀವ್: ಉಕ್ರೇನ್‌ ಮೇಲೆ ದಾಳಿ ಮುಂದುವರೆಸಿರುವ ರಷ್ಯಾ ಸೇನೆ ಇದೀಗ ಚೆರ್ನೋಬಿಲ್ ಪರಮಾಣು ವಿದ್ಯುತ್ ಸ್ಥಾವರವನ್ನು ವಶಪಡಿಸಿಕೊಂಡಿವೆ ಎಂದು ತಿಳಿದುಬಂದಿದೆ.

 ರಷ್ಯಾದ ಟ್ಯಾಂಕರ್‌ಗಳು ಉಕ್ರೇನ್‌ ದೇಶವನ್ನು ಹಲವು ಗಡಿಗಳ ಮೂಲಕ ಪ್ರವೇಶ ಮಾಡಿದ್ದು, ರಾಜಧಾನಿ ಕೀವ್‌ ಸೇರಿದಂತೆ ಹಲವು ಆಯಕಟ್ಟಿನ ನಗರಗಳನ್ನು ವಶಪಡಿಸಿಕೊಳ್ಳುವತ್ತ ಮುಂದಡಿ ಇಟ್ಟಿದೆ.

ಈ ಬಗ್ಗೆ ಸ್ವತಃ  ಉಕ್ರೇನ್ ಅಧ್ಯಕ್ಷೀಯ ಕಚೇರಿಯ ಸಲಹೆಗಾರ ಮೈಖೈಲೊ ಪೊಡೊಲ್ಯಾಕ್ ಮಾಹಿತಿ ನೀಡಿದ್ದು, ‘ರಷ್ಯನ್ನರ ಸಂಪೂರ್ಣ ಅರ್ಥಹೀನ ದಾಳಿಯ ನಂತರ ಚೆರ್ನೋಬಿಲ್ ಪರಮಾಣು ವಿದ್ಯುತ್ ಸ್ಥಾವರವು ಸುರಕ್ಷಿತವಾಗಿದೆ ಎಂದು ಹೇಳುವುದು ಅಸಾಧ್ಯ’ಎಂದು ಅವರು ಹೇಳಿದ್ದಾರೆ.

‘ಇದು ಯುರೋಪಿಗೆ ಸದ್ಯ ಅತ್ಯಂತ ಗಂಭೀರ ಆತಂಕವಾಗಿದೆ. ಅಣುಸ್ಥಾವರವನ್ನು ರಷ್ಯಾ ಸೇನೆ ವಶಕ್ಕೆ ಪಡೆದಿದ್ದು, ಇದು ಮುಂದೆ ಇನ್ನೂ ಕಠಿಣ ಪರಿಸ್ಥಿತಿಗಳಿಗೆ ನಾಂದಿ ಹಾಡಬಹುದು ಎಂದು ಜಾಗತಿಕ ಸಮುದಾಯಕ್ಕೆ ಎಚ್ಚರಿಕೆ ನೀಡಿದ್ದಾರೆ.

 ರಷ್ಯಾದ ಟ್ಯಾಂಕರ್‌ಗಳು ಉಕ್ರೇನ್‌ ದೇಶವನ್ನು ಹಲವು ಗಡಿಗಳ ಮೂಲಕ ಪ್ರವೇಶ ಮಾಡಿದ್ದು, ರಾಜಧಾನಿ ಕೀವ್‌ ಸೇರಿದಂತೆ ಹಲವು ಆಯಕಟ್ಟಿನ ನಗರಗಳನ್ನು ವಶಪಡಿಸಿಕೊಳ್ಳುವತ್ತ ಮುಂದಡಿ ಇಟ್ಟಿದೆ.

Join Whatsapp
Exit mobile version