Home ರಾಷ್ಟ್ರೀಯ ಡಾಲರ್ ಎದುರು ಸಾರ್ವಕಾಲಿಕ ಕುಸಿತ ಕಂಡ ರೂಪಾಯಿ ಮೌಲ್ಯ

ಡಾಲರ್ ಎದುರು ಸಾರ್ವಕಾಲಿಕ ಕುಸಿತ ಕಂಡ ರೂಪಾಯಿ ಮೌಲ್ಯ

ಮುಂಬೈ: ವಾರದ ಕೊನೆಯ ವಹಿವಾಟಿನ ದಿನವಾದ ಶುಕ್ರವಾರ, ಅಮೆರಿಕನ್ ಡಾಲರ್ ಎದುರು ಭಾರತೀಯ ರೂಪಾಯಿ ಈವರೆಗಿನ ಕನಿಷ್ಠ ಮಟ್ಟಕ್ಕೆ ಕುಸಿದಿದೆ.


ಇದು ಸಾರ್ವಕಾಲಿಕ ಕನಿಷ್ಠ ದರವಾಗಿದ್ದು, ಇಂದಿನ ವಹಿವಾಟಿನ ವೇಳೆ ಡಾಲರ್ ಎದುರು ರೂಪಾಯಿ ಮೌಲ್ಯ 84 ರೂಪಾಯಿಗೆ ಇಳಿದಿದೆ.


ಇದು ಗುರುವಾರ ಮುಕ್ತಾಯಕ್ಕೆ ಇದ್ದ ಬೆಲೆಯಾದ 83.94 ರೂಪಾಯಿಗಳಿಗೆ ಹೋಲಿಸಿದರೆ 12 ಪೈಸೆಯಷ್ಟು ಕಡಿಮೆ. 83.98 ರೂಪಾಯಿಯೊಂದಿಗೆ ದಿನದ ವಹಿವಾಟು ಅರಂಭವಾದರೆ, ಮಧ್ಯಂತರ ಅವಧಿಯಲ್ಲಿ ದಾಖಲೆ ಕನಿಷ್ಠ ಮಟ್ಟವನ್ನು ತಲುಪಿ 84.07 ರೂಪಾಯಿ ಆಯಿತು.


ಭಾರತೀಯ ರಿಸರ್ವ್ ಬ್ಯಾಂಕ್ ಈ ಮಿತಿಯನ್ನು ಎರಡು ತಿಂಗಳಿನಿಂದ ಸಮರ್ಥಿಸಿಕೊಳ್ಳುತ್ತಾ ಬಂದಿದೆ. ಈ ಕರೆನ್ಸಿ ಮಾರುಕಟ್ಟೆಯಲ್ಲಿ ತೀಕ್ಷ್ಣ ಪ್ರಮಾಣದ ಚಂಚಲತೆಯನ್ನು ತಡೆಯುವ ಉದ್ದೇಶದಿಂದ ಶುಕ್ರವಾರ ಆರ್ಬಿಐ ಮಧ್ಯಪ್ರವೇಶ ಮಾಡಿದೆ.


ಕಾರ್ಯತಂತ್ರದ ಅಂಗವಾಗಿ 84 ರೂಪಾಯಿ ಮಿತಿಯನ್ನು ದಾಟಲು ಆರ್ ಬಿಐ ಅವಕಾಶ ನೀಡಿದೆ ಎನ್ನುವುದು ಕೆಲ ಡೀಲರ್ ಗಳ ಭಾವನೆ. ಇರಾನ್-ಇಸ್ರೇಲ್ ಸಂಘರ್ಷ ಮತ್ತಷ್ಟು ಉಲ್ಬಣಗೊಂಡಲ್ಲಿ ಹೆಚ್ಚಿನ ಚಂಚಲತೆ ಸೃಷ್ಟಿಯಾಗುವ ನಿರೀಕ್ಷೆ ಇರುವ ಹಿನ್ನೆಲೆಯಲ್ಲಿ ಈ ಅವಕಾಶ ಮಾಡಿಕೊಟ್ಟಿದೆ ಎಂದು ವಿಶ್ಲೇಷಿಸಲಾಗುತ್ತಿದೆ.


ಅಮೆರಿಕದ ಫೆಡರಲ್ ರಿಸರ್ವ್, ನವೆಂಬರ್ನಲ್ಲಿ 50 ಮೂಲ ಅಂಶಗಳಷ್ಟು ದರವನ್ನು ಕಡಿತಗೊಳಿಸುವ ಮಬ್ಬು ನಿರೀಕ್ಷೆಯ ಹಿನ್ನೆಲೆಯಲ್ಲಿ ಡಾಲರ್ಗಳ ಬಲವರ್ಧನೆಯು, ರೂಪಾಯಿ ದುರ್ಬಲತೆಗೆ ಮತ್ತಷ್ಟು ಕೊಡುಗೆ ನೀಡಿದೆ.

Join Whatsapp
Exit mobile version