Home ಟಾಪ್ ಸುದ್ದಿಗಳು ಆರೆಸ್ಸೆಸ್ ಅಂತಾರಾಷ್ಟ್ರೀಯ ಘಟಕದ ಕಾರ್ಯಕ್ರಮದಲ್ಲಿ ಕ್ಯಾಲಿಫೋರ್ನಿಯಾದ 8 ನಗರಗಳ ಮೇಯರ್ ಗಳು ಭಾಗಿ

ಆರೆಸ್ಸೆಸ್ ಅಂತಾರಾಷ್ಟ್ರೀಯ ಘಟಕದ ಕಾರ್ಯಕ್ರಮದಲ್ಲಿ ಕ್ಯಾಲಿಫೋರ್ನಿಯಾದ 8 ನಗರಗಳ ಮೇಯರ್ ಗಳು ಭಾಗಿ

ಕ್ಯಾಲಿಫೋರ್ನಿಯಾ : ಭಾರತದಲ್ಲಿ ವಿಭಜನಕಾರಿ ಸಿದ್ಧಾಂತಕ್ಕೆ ಸಾಕಷ್ಟು ಟೀಕೆಗೆ ಗುರಿಯಾಗಿರುವ ಆರೆಸ್ಸೆಸ್ ತನ್ನ ಜಾಲವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಸ್ತರಿಸಿಕೊಳ್ಳುತ್ತಿದೆ. ಆರೆಸ್ಸೆಸ್ ನ ಅಂತಾರಾಷ್ಟ್ರೀಯ ಘಟಕ ಹಿಂದೂ ಸ್ವಯಂ ಸೇವಕ ಸಂಘ ಯುಎಸ್ ಎ (ಎಚ್ ಎಸ್ ಎಸ್ – ಯುಎಸ್ ಎ) ಅಮೆರಿಕ ಶಾಖೆಯ ವತಿಯಿಂದ ಇತ್ತೀಚೆಗೆ ಕ್ಯಾಲಿಫೋರ್ನಿಯಾದ ಸ್ಯಾನ್ ಫ್ರಾನ್ಸಿಸ್ಕೊದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅಲ್ಲಿನ ಎಂಟು ನಗರಗಳ ಮೇಯರ್, ಉಪ ಮೇಯರ್ ಗಳು ಭಾಗಿಯಾಗಿರುವ ಬಗ್ಗೆ ವರದಿಯೊಂದು ತಿಳಿಸಿದೆ.

ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಆನ್ ಲೈನ್ ಮೂಲಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಎಚ್ ಎಸ್ ಎಸ್ ಉತ್ತರ ಅಮೆರಿಕ ಅಧ್ಯಕ್ಷ ವೇದ ನಂದ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆದಿದೆ.

ಡಬ್ಲಿನ್ ಮೇಯರ್ ಮೆಲಿಸ್ಸಾ, ಫ್ರಿಮಾಂಟ್ ಮೇಯರ್ ಲಿಲಿ ಮೇ, ಫೋಸ್ಟರ್ ಸಿಟಿ ಉಪ ಮೇಯರ್ ಸಂಜಯ್ ಗೆಹಾನಿ, ಹೇವಾರ್ಡ್ ಮೇಯರ್ ಬಾರ್ಬರಾ ಹಲ್ಲಿಡೆ, ಲಿವರ್ ಮೋರ್ ಮೇಯರ್ ಬಾಬ್ ವಾರ್ನರ್, ನೆವಾರ್ಕ್ ಮೇಯರ್ ಅಲಾನ್ ನಾಗಿ, ಪ್ಲೆಸಂಟಾನ್ ಮೇಯರ್ ಕಾರ್ಲ ಬ್ರೌನ್, ಸ್ಯಾನ್ ರಮೊನ್ ಮೇಯರ್ ಡೇವ್ ಹುಡ್ಸನ್ ಮುಂತಾದವರು ಕಾರ್ಯಕ್ರಮದಲ್ಲಿ ಭಾಗಿಯಾದ ಮೇಯರ್ ಗಳು.  

ಭಾರತದಲ್ಲಿ ತನ್ನ ವಿಭಜನಕಾರಿ ನೀತಿಯಿಂದ ಆರೆಸ್ಸೆಸ್, ಧರ್ಮ ದ್ವೇಷದ ರಾಜಕಾರಣದಲ್ಲಿ ನಿರತವಾಗಿದೆ. ತನ್ನ ರಾಜಕೀಯ ಮುಖವಾಣಿಯಾದ ಬಿಜೆಪಿ ಮೂಲಕ ಸಂಘಟನೆಯ ಅಜೆಂಡಾಗಳನ್ನು ಜಾರಿಗೊಳಿಸುತ್ತಿದೆ.  

Join Whatsapp
Exit mobile version