Home ಟಾಪ್ ಸುದ್ದಿಗಳು ಭೂ ಸುಧಾರಣಾ ತಿದ್ದುಪಡಿ ಕಾಯ್ದೆಗೆ ಜೆಡಿಎಸ್ ಬೆಂಬಲಿಸಿದ್ದು ಯಾಕೆ ಗೊತ್ತಾ? | ಕುಮಾರಸ್ವಾಮಿ ಸಮರ್ಥನೆಗಳನ್ನು ಓದಿ

ಭೂ ಸುಧಾರಣಾ ತಿದ್ದುಪಡಿ ಕಾಯ್ದೆಗೆ ಜೆಡಿಎಸ್ ಬೆಂಬಲಿಸಿದ್ದು ಯಾಕೆ ಗೊತ್ತಾ? | ಕುಮಾರಸ್ವಾಮಿ ಸಮರ್ಥನೆಗಳನ್ನು ಓದಿ

ಬೆಂಗಳೂರು : ಭೂ ಸುಧಾರಣಾ ತಿದ್ದುಪಡಿ ಕಾಯ್ದೆಗೆ ಜೆಡಿಎಸ್ ಬೆಂಬಲಿಸಿರುವುದಕ್ಕೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಸಮರ್ಥಿಸಿಕೊಂಡಿದ್ದಾರೆ. ಸರಣಿ ಟ್ವೀಟ್ ಮಾಡಿರುವ ಅವರು ತಾವು ಕಾಯ್ದೆ ಬೆಂಬಲಿಸಿರುವುದಕ್ಕೆ ಕಾರಣಗಳನ್ನು ನೀಡಿದ್ದಾರೆ.

ವಿರೋಧಕ್ಕೆ ಮಾತ್ರ ವಿರೋಧ ಪಕ್ಷವಲ್ಲ, ತನ್ನ ಜವಾಬ್ದಾರಿಗಳನ್ನು ಅದು ರಚನಾತ್ಮಕವಾಗಿ ನಿರ್ವಹಿಸಬೇಕು. ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ವಿಚಾರದಲ್ಲಿ ಜೆಡಿಎಸ್ ರೈತರ ಹಿತ ಕಾಯುವ ಕೆಲಸ ಮಾಡಿದೆ. ಕಾಯ್ದೆ ವಿಚಾರವಾಗಿ ನ್ಯಾಯ ಕಾಂಗ್ರೆಸ್ ಕಡೆಯೂ ಇರಲಿಲ್ಲ, ಬಿಜೆಪಿ ಕಡೆಯೂ ಇರಲಿಲ್ಲ. ಕಾಯ್ದೆ ಸಮತೋಲನಗೊಳ್ಳುವಂತೆ ಜೆಡಿಎಸ್ ಮಾಡಿದೆ ಎಂದು ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.,

ಬಿಜೆಪಿ ಪ್ರಸ್ತಾಪಿಸಿದ ಭೂ ಸುಧಾರಣಾ ತಿದ್ದುಪಡಿ ಮಸೂದೆಯಲ್ಲಿದ್ದ ಕೆಲವು ಅಂಶಗಳನ್ನು ಜೆಡಿಎಸ್ ಆರಂಭದಲ್ಲಿ ವಿರೋಧಿಸಿತ್ತು. ಮಸೂದೆಯಲ್ಲಿ ಏನೇನು ಬದಲಾವಣೆಗಳಾಗಬೇಕೆಂಬುದನ್ನು ಸೂಚಿಸಲಾಗಿತ್ತು. ತಮ್ಮ ಪಕ್ಷ ಹೇಳಿದಂತೆ ಬದಲಾವಣೆಗಳಾಗಿವೆ. ಹೀಗಾಗಿ ತಾವು ಮಸೂದೆ ಬೆಂಬಲಿಸಿದುದಾಗಿ ಕುಮಾರಸ್ವಾಮಿ ಹೇಳಿದ್ದಾರೆ.

ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ಬೆಂಬಲಿಸಲು ಇದ್ದ ಕಾರಣಗಳ ಕುರಿತು ಕುಮಾರಸ್ವಾಮಿ ಅವರ ಸಮರ್ಥನೆಗಳು ಈ ಕೆಳಗಿನ ಸರಣಿ ಟ್ವೀಟ್ ಗಳಲ್ಲಿವೆ…

Join Whatsapp
Exit mobile version