ಇಸ್ಲಾಮಾಬಾದ್: ಪಾಕಿಸ್ತಾನ ಮತ್ತು ಭಾರತದ ನಡುವಿನ ಮಾತುಕತೆಗೆ RSS ಅಡ್ಡಿಯಾಗಿದೆ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಆರೊಪಿಸಿದ್ದಾರೆ.
ಸುದ್ದಿ ಸಂಸ್ಥೆ ANIಯೊಂದಿಗೆ ಮಾತನಾಡಿದ ಅವರು, ನಾವು ಭಾರತದೊಂದಿಗೆ ನೆರೆಹೊರೆಯವರಂತೆ ಬದುಕಲು ಬಹಳ ದೀರ್ಘ ಕಾಲದಿಂದ ಕಾಯುತ್ತಿದ್ದೇವೆ, ಆದರೆ ನಾವು ಏನು ಮಾಡುವುದು? ನಮ್ಮ ಮಾತುಕತೆಗೆ RSS ಸಿದ್ಧಾಂತ ಅಡ್ಡಿಯಾಗಿದೆ ಎಂದು ಆರೋಪಿಸಿದ್ದಾರೆ.
ವೀಡಿಯೋ ವೀಕ್ಷಿಸಿ…
ಉಜ್ಬೇಕಿಸ್ತಾನದಲ್ಲಿನ ಸೆಂಟ್ರಕ್-ದಕ್ಷಿಣ ಏಷ್ಯಾ ಸಮ್ಮೇಳನದಲ್ಲಿ ಭಾಗಿಯಾಗಿದ್ದ ಇಮ್ರಾನ್ ಖಾನ್ ಅವರು, ಪಾಕಿಸ್ತಾನ ಮತ್ತು ಭಾರತದ ನಡುವೆ ಸೌಹಾರ್ದಯುತ ಮಾತುಕತೆಗೆ RSS ಸಿದ್ಧಾಂತಗಳು ಅಡ್ಡಿಯಾಗಿದೆ. ಬಹಳ ಕಾಲದಿಂದ ಭಾರತದೊಂದಿಗೆ ಉತ್ತಮ ನಾಗರಿಕ ನೆರೆ ರಾಜ್ಯವಾಗಿ ಮುಂದವರಿಯಲು ನಾವು ಕಾಯುತ್ತಿದ್ದೇವೆ ಎಂದು ಹೇಳಿದ್ದಾರೆ.