Home ಕರಾವಳಿ ಸಾರ್ವಜನಿಕ ಸ್ಥಳಗಳಲ್ಲಿ ಕಸ ಬಿಸಾಡುವವರಿಗೆ ₹ 25 ಸಾವಿರ ದಂಡ ವಿಧಿಸಲು ಅವಕಾಶ : ಎಚ್ಚರಿಕೆ...

ಸಾರ್ವಜನಿಕ ಸ್ಥಳಗಳಲ್ಲಿ ಕಸ ಬಿಸಾಡುವವರಿಗೆ ₹ 25 ಸಾವಿರ ದಂಡ ವಿಧಿಸಲು ಅವಕಾಶ : ಎಚ್ಚರಿಕೆ ನೀಡಿದ ಪಾಲಿಕೆ

ಮಂಗಳೂರು: ಸ್ವಚ್ಚ ಮಂಗಳೂರು ನಿರ್ಮಾಣಕ್ಕಾಗಿ ಸಾರ್ವಜನಿಕ ಸ್ಥಳಗಳಲ್ಲಿ ಕಸ ಬಿಸಾಡುವವರಿಗೆ ಕನಿಷ್ಠ ₹  1500 ರಿಂದ ಗರಿಷ್ಠ ₹ 25 ಸಾವಿರದವರೆಗೆ ದಂಡ ವಿಧಿಸಲಾಗುವುದು ಎಂದು ಮಹಾನಗರ ಪಾಲಿಕೆ ಎಚ್ಚರಿಕೆ ನೀಡಿದೆ.

ಈ ಕುರಿತು ಮಾತನಾಡಿದ ಪಾಲಿಕೆಯ ಆರೋಗ್ಯಾಧಿಕಾರಿ ಡಾ. ಮಂಜಯ್ಯ ಶೆಟ್ಟಿ ಅವರು, ಸಾರ್ವಜನಿಕ ಸ್ಥಳಗಳಲ್ಲಿ ಕಸ ಬಿಸಾಡುವವರಿಗೆ ಕನಿಷ್ಠ ರೂ.1500 ರಿಂದ ಗರಿಷ್ಠ 25 ಸಾವಿರದವರೆಗೆ ದಂಡ ವಿಧಿಸುವ ಅಧಿಕಾರವನ್ನು ಪಾಲಿಕೆಯ ಆರೋಗ್ಯ ನಿರೀಕ್ಷಕರಿಗೆ ಹಾಗೂ ಆರೋಗ್ಯಧಿಕಾರಿಗೆ ನೀಡಲಾಗಿದೆ ಎಂದು ಹೇಳಿದರು.

ಸಾರ್ವಜನಿಕ ಸ್ಥಳಗಳಲ್ಲಿ ಕಸ ಬಿಸಾಡುವವರಲ್ಲಿ ಹೋಟೆಲ್ ಹಾಗೂ ಇತರ ಉದ್ದಿಮೆದಾರರ ಪ್ರಮಾಣವೇ ಜಾಸ್ತಿ , ಒಮ್ಮೆ ಎಚ್ಚರಿಕೆ ನೀಡಿ ಬಿಡುತ್ತೇವೆ. ಅವರು ಮತ್ತೆ ಮತ್ತೆ ಅದೇ ತಪ್ಪನ್ನು ಮಾಡಿದರೆ ದಂಡ ವಿಧಿಸುವುದು ಅನಿವಾರ್ಯ ಎಂದರು.

ಇದಲ್ಲದೆ, ಸಾರ್ವಜನಿಕ ಸ್ಥಳಗಳಲ್ಲಿ ಕಸ ರಾಶಿ ಹಾಕುವುದಕ್ಕೆ ಕಡಿವಾಣ ಹಾಕಲು ಮೇಯರ್ ಜಯಾನಂದ ಅಂಚನ್ ರಾತ್ರಿ ಹೊತ್ತಿನಲ್ಲಿ ದಿಢೀರ್ ಸವಾರಿ ಕೈಗೊಳ್ಳುತಿದ್ದಾರೆ.

Join Whatsapp
Exit mobile version