ಬೀದಿ ನಾಯಿಗಳಿಗೆ ಎಲ್ಲೆಂದರಲ್ಲಿ ಆಹಾರ ಹಾಕಿದರೆ 2,000 ರೂ. ದಂಡ

Prasthutha|

ಪಟಿಯಾಲಾ: ಕ್ಯಾಂಪಸ್ ಒಳಗೆ ಗೊತ್ತುಪಡಿಸಿದ ಸ್ಥಳವಲ್ಲದೆ ಎಲ್ಲೆಂದರಲ್ಲಿ ಬೀದಿ ನಾಯಿಗಳಿಗೆ ಆಹಾರ ನೀಡುವ ಜನರಿಗೆ 2,000 ರೂ.ಗಳ ದಂಡ ವಿಧಿಸಲು ಪಂಜಾಬಿ ವಿಶ್ವವಿದ್ಯಾಲಯವು ನಿರ್ಧರಿಸಿದ್ದು, ಕ್ಯಾಂಪಸ್ ನಲ್ಲಿ ನಾಯಿಗಳಿಗೆ ಕಿರುಕುಳ ನೀಡುವ, ಹೊಡೆಯುವ ಅಥವಾ ಹಲ್ಲೆ ಮಾಡುವವರಿಗೆ ಕೂಡಾ 2,000 ರೂ.ಗಳ ದಂಡವನ್ನು ವಿಧಿಸಲಾಗುವುದು ಎಂದು ವಿಶ್ವವಿದ್ಯಾಲಯ ಘೋಷಿಸಿದೆ.

- Advertisement -

ಇತ್ತೀಚೆಗೆ ವಿಶ್ವವಿದ್ಯಾಲಯದಲ್ಲಿ ಅನೇಕ ನಾಯಿ ಕಡಿತದ ಘಟನೆಗಳು ವರದಿಯಾಗಿದ್ದು ಸಮಸ್ಯೆಯನ್ನು ಪರಿಹರಿಸಬೇಕೆಂದು  ವಿದ್ಯಾರ್ಥಿಗಳು ಒತ್ತಾಯಿಸಿದ್ದರು. ಆದಾಗ್ಯೂ, ಪ್ರಾಣಿ ಪ್ರೇಮಿಗಳ ಗುಂಪೊಂದು ನಾಯಿಗಳು ಮಾನವ ಕ್ರೌರ್ಯಕ್ಕೆ ಬಲಿಯಾಗಿವೆ ಮತ್ತು ಆದ್ದರಿಂದ ಅವುಗಳ ಜೀವಗಳನ್ನು ಸಹ ರಕ್ಷಿಸಬೇಕು ಎಂದು ಮನವಿ ಮಾಡಿತ್ತು. ಈ ವಿಷಯವನ್ನು ಪರಿಶೀಲಿಸಲು ವಿಶ್ವವಿದ್ಯಾಲಯದಲ್ಲಿ ಸಮಿತಿಯನ್ನು ರಚಿಸಲಾಗಿದ್ದು ಎರಡೂ ಕಡೆಗಳನ್ನು ಪರಿಗಣಿಸಿದ ನಂತರ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.

ವಿಶ್ವವಿದ್ಯಾಲಯವು ಯಾವಾಗಲೂ ಪ್ರಾಣಿಗಳ ಬಗ್ಗೆ ಮಾನವೀಯ ನಿಲುವನ್ನು ತೆಗೆದುಕೊಳ್ಳುತ್ತದೆ ಎಂದು ವಿಶ್ವವಿದ್ಯಾಲಯದ ಕುಲಸಚಿವ ಡಾ.ನವಜೋತ್ ಕೌರ್ ಹೇಳಿದ್ದು ಈ ರೀತಿಯಾಗಿ ವಿದ್ಯಾರ್ಥಿಗಳು ಮತ್ತು ಇತರ ಸಂದರ್ಶಕರನ್ನು ನಾಯಿ ಕಡಿತದಿಂದ ರಕ್ಷಿಸಲಾಗುವುದು ಮತ್ತು ಪ್ರಾಣಿಪ್ರಿಯರ ಭಾವನೆಗಳನ್ನು ಸಹ ಗೌರವಿಸಲಾಗುವುದು ಎಂದು ಅವರು ಹೇಳಿದ್ದಾರೆ.

Join Whatsapp
Exit mobile version