Home ಟಾಪ್ ಸುದ್ದಿಗಳು ಪೋಷಕರಿಂದ 100 ರೂ.ದೇಣಿಗೆಗೆ ವ್ಯಾಪಕ ಆಕ್ರೋಶ: ಸುತ್ತೋಲೆ ವಾಪಸ್ ಪಡೆದ ಸರ್ಕಾರ

ಪೋಷಕರಿಂದ 100 ರೂ.ದೇಣಿಗೆಗೆ ವ್ಯಾಪಕ ಆಕ್ರೋಶ: ಸುತ್ತೋಲೆ ವಾಪಸ್ ಪಡೆದ ಸರ್ಕಾರ

ಬೆಂಗಳೂರು: ಸರಕಾರಿ ಶಾಲಾ ಮಕ್ಕಳ ಪೋಷಕರಿಂದ 100 ರೂ.ದೇಣಿಗೆ ಪಡೆಯಬೇಕು ಎಂದು ಹೊರಡಿಸಿದ್ದ ಸುತ್ತೋಲೆಯನ್ನು ಜನಾಕ್ರೋಶದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ವಾಪಸ್ ಪಡೆದಿದೆ.


ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಶೈಕ್ಷಣಿಕ ಸ್ಥಿತಿಗತಿಯನ್ನು ಉತ್ತಮಪಡಿಸಲು ಹಾಗೂ ಸೌಲಭ್ಯಗಳಿಂದ ಬಲಪಡಿಸಲು, ವಿದ್ಯಾರ್ಥಿಗಳ ಪೋಷಕರುಗಳಿಂದ ಮಾಸಿಕ ತಲಾ 100 ರೂ.ಗಳ ಕೊಡುಗೆ ಅಥವಾ ದಾನಗಳನ್ನು ಸಂಗ್ರಹಿಸುವಂತೆ ಶಾಲಾ ಮೇಲುಸ್ತುವಾರಿಗಳಿಗೆ ಅನುಮತಿ ನೀಡಿ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿತ್ತು. ಸುತ್ತೋಲೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವು ರಾಜಕೀಯ ಪಕ್ಷದ ಮುಖಂಡರು, ಶಿಕ್ಷಣ ತಜ್ಞರು, ಪೋಷಕರ ಸಂಘ, ವಿದ್ಯಾರ್ಥಿ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದವು. ಈ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಸುತ್ತೋಲೆಯನ್ನು ವಾಪಸ್ ಪಡೆದಿರುವುದಾಗಿ ತಿಳಿಸಿದೆ.

Join Whatsapp
Exit mobile version