ರಾಯಚೂರು: ಕೊಳೆತ ಮೊಟ್ಟೆ ಹಾಗೂ ಆಹಾರ ಪದಾರ್ಥಗಳು ಅಂಗನವಾಡಿಗಳಿಗೆ ಪೂರೈಸಿದ ಹಿನ್ನೆಲೆಯಲ್ಲಿ ಸ್ಥಳೀಯರು ಅಂಗನವಾಡಿ ಕಾರ್ಯಕರ್ತರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಗರದ 16ನೇ ವಾರ್ಡ್ ನ ತಿಮ್ಮಾಪುರ ಪೇಟೆಯಲ್ಲಿ ನಡೆದಿದೆ.
ಅಂಗನವಾಡಿ ಕೇಂದ್ರಕ್ಕೆ ಕೊಳೆತ ಮೊಟ್ಟೆ, ಹುಳ ಬಿದ್ದಿರುವ ಶೇಂಗಾ ಪೂರೈಕೆಯಾಗಿದೆ ಎಂದು ಆರೋಪಿಸಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಅಂಗನವಾಡಿ ಕಾರ್ಯಕರ್ತೆ, ಪೂರೈಕೆಯ ವೇಳೆಯಲ್ಲೇ ಆಹಾರ ಪದಾರ್ಥಗಳು ಹಾಳಾಗಿವೆ. ನಾವೇನೂ ಮಾಡೋದು ಎಂದು ಅಧಿಕಾರಿಗಳ ಕಡೆ ಬೊಟ್ಟು ಮಾಡಿದ್ದಾರೆ.