ಗುಜರಾತ್: ಭಾರೀ ಮಳೆಗೆ ರಾಜ್ ಕೋಟ್ ವಿಮಾನ ನಿಲ್ದಾಣದ ಟರ್ಮಿನಲ್ ನ ಹೊರಭಾಗದ ಮೇಲ್ಛಾವಣಿ ಕುಸಿತ

Prasthutha|

ರಾಜ್ ಕೋಟ್: ಒಂದು ದಿನದ ಹಿಂದೆ ದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್ 1 ರಲ್ಲಿ ಮೇಲ್ಛಾವಣಿ ಕುಸಿದು ಓರ್ವ ವ್ಯಕ್ತಿ ಸಾವಿಗೀಡಾಗಿದ್ದರು. ಇದೀಗ ಶನಿವಾರ ಸುರಿದ ಭಾರೀ ಮಳೆಗೆ ರಾಜ್ ಕೋಟ್ ವಿಮಾನ ನಿಲ್ದಾಣದ ಪ್ರಯಾಣಿಕರ ಪಿಕಪ್ ಮತ್ತು ಡ್ರಾಪ್ ಪ್ರದೇಶದ ಮೇಲ್ಛಾವಣಿ ಕುಸಿದಿದೆ.

- Advertisement -

ಪ್ರಾಥಮಿಕ ಮಾಹಿತಿಯ ಪ್ರಕಾರ, ಯಾರಿಗೂ ಗಾಯ ಅಥವಾ ಸಾವುನೋವುಗಳ ವರದಿಯಾಗಿಲ್ಲ.


ನೈಋತ್ಯ ಮಾನ್ಸೂನ್ ಕಾಲಿಡುತ್ತಿದ್ದಂತೆ ಗುಜರಾತ್ನಲ್ಲಿ ಭಾರೀ ಮಳೆಯಾಗುತ್ತಿದೆ. ಕೆಲವು ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯ ನಡುವೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಏಳು ತಂಡಗಳನ್ನು ಕಚ್, ರಾಜ್ಕೋಟ್, ದೇವಭೂಮಿ ದ್ವಾರಕಾ, ಗಿರ್ ಸೋಮನಾಥ್, ಭಾವನಗರ, ನರ್ಮದಾ ಮತ್ತು ವಲ್ಸಾದ್ ಜಿಲ್ಲೆಗಳಲ್ಲಿ ನಿಯೋಜಿಸಲಾಗಿದೆ.

- Advertisement -

Join Whatsapp
Exit mobile version