Home ಕರಾವಳಿ ಮಂಜೇಶ್ವರ: ಕಾವಲುಗಾರನನ್ನು ಕಟ್ಟಿಹಾಕಿ ನಗ-ನಗದು ದರೋಡೆ

ಮಂಜೇಶ್ವರ: ಕಾವಲುಗಾರನನ್ನು ಕಟ್ಟಿಹಾಕಿ ನಗ-ನಗದು ದರೋಡೆ

ಮಂಜೇಶ್ವರ: ಕಾವಲುಗಾರನನ್ನು ಕಟ್ಟಿಹಾಕಿ ನಗ-ನಗದು ದರೋಡೆ ಮಾಡಿರುವ ಘಟನೆ ಹೊಸಂಗಡಿಯ ಜ್ಯುವೆಲ್ಲರಿಯೊಂದರಲ್ಲಿ ನಡೆದಿದೆ. ಮಂಜೇಶ್ವರ ಮೂಲದ ಅಶ್ರಫ್ ಎಂಬವರ ಒಡೆತನದ ಹೊಸಂಗಡಿಯ ರಾಜಧಾನಿ ಜ್ಯುವೆಲ್ಲರಿಯಲ್ಲಿ ಈ ದರೋಡೆ ನಡೆದಿದೆ.

4.5 ಲಕ್ಷ ರೂ. ಮತ್ತು 15 ಕೆಜಿ ಬೆಳ್ಳಿಯ ಆಭರಣಗಳನ್ನು ಕಳವು ಮಾಡಲಾಗಿದೆ ಎಂದು ಅಶ್ರಫ್ ಪೊಲೀಸರಿಗೆ ದೂರು ನೀಡಿದ್ದಾರೆ. ಗಂಭೀರ ಗಾಯಗೊಂಡಿರುವ ಕಾವಲುಗಾರ ಅಬ್ದುಲ್ಲಾ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಕಾಸರಗೋಡು ಡಿವೈಎಸ್ಪಿ ಬಾಲಕೃಷ್ಣನ್ ನಾಯರ್ ಮತ್ತು ಮಂಜೇಶ್ವರ ಸಿಐ ಸಂತೋಷ್ ಕುಮಾರ್ ನೇತೃತ್ವದಲ್ಲಿ ತನಿಖೆ ಪ್ರಾರಂಭಿಸಲಾಗಿದ್ದು, ಘಟನಾ ಸ್ಥಳಕ್ಕೆ ಶ್ವಾನ ದಳ ಮತ್ತು ಬೆರಳಚ್ಚು ತಜ್ಞರು ಆಗಮಿಸಿ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ.

Join Whatsapp
Exit mobile version