Home ಟಾಪ್ ಸುದ್ದಿಗಳು ಅಮೆರಿಕಾದಲ್ಲಿ ರಸ್ತೆ ಅಪಘಾತ; ಭಾರತದ ಮೂವರು ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವು

ಅಮೆರಿಕಾದಲ್ಲಿ ರಸ್ತೆ ಅಪಘಾತ; ಭಾರತದ ಮೂವರು ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವು

ವಾಷಿಂಗ್ಟನ್: ಭೀಕರ ರಸ್ತೆ ಅಪಘಾತದಲ್ಲಿ ಭಾರತದ ಮೂವರು ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟು, ಐವರು ಗಂಭೀರವಾಗಿ ಗಾಯಗೊಂಡ ಘಟನೆ ಅಮೆರಿಕಾದ ನ್ಯೂ ಹೆವೆನ್ ನಲ್ಲಿ ನಡೆದಿದೆ.‌

ಮೃತ ವಿದ್ಯಾರ್ಥಿಗಳನ್ನು ಆಂಧ್ರ ಪ್ರದೇಶ ಮತ್ತು ತೆಲಂಗಾಣ ಮೂಲದ ಗೋಡ ಪ್ರೇಮ್ ಕುಮಾರ್ ರೆಡ್ಡಿ (26) , ಗುಲ್ಲಪೆಲ್ಲಿ ಪವಣಿ (22) , ಸಾಯಿ ನರಸಿಂಹ (23) ಎಂದು ಗುರುತಿಸಲಾಗಿದೆ . ಅಮೆರಿಕಾಅದ ನ್ಯೂಹೆವನ್ ವಿಶ್ವವಿದ್ಯಾಲಯದಲ್ಲಿ ಎಂಎಸ್ ವ್ಯಾಸಂಗ ಮಾಡುತ್ತಿರುವ ಈ ವಿದ್ಯಾರ್ಥಿಗಳು ವಿಹಾರಕ್ಕೆ ತೆರಳಿ ಹಿಂದಿರುಗುತ್ತಿದ್ದರು.

ದಟ್ಟ ಮಂಜು ಇದ್ದ ಕಾರಣ ಮಿನಿವ್ಯಾನ್ ಹಾಗೂ ಕಾರ್ ಮುಖಾಮುಖಿ ಡಿಕ್ಕಿಯಾಗಿ ಈ ಅಪಘಾತ ಸಂಭವಿಸಿದೆ. ಮಿನಿವ್ಯಾನ್ ನಲ್ಲಿ 7 ಮಂದಿ ಹಾಗೂ ಕಾರಿನಲ್ಲಿ ಮೂವರು ಇದ್ದರು ಎನ್ನಲಾಗಿದೆ. ಸದ್ಯ ಗಂಭೀರವಾಗಿ ಗಾಯಗೊಂಡ ವಿದ್ಯಾರ್ಥಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.

Join Whatsapp
Exit mobile version