Home ಕರಾವಳಿ ಕಾಣಿಯೂರು ಘಟನೆ ಖಂಡಿಸಿ ನಾಳೆ ಪ್ರತಿಭಟನೆ: ಎಸ್‌ಡಿಪಿಐ ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿಯಿಂದ ಬೆಂಬಲ

ಕಾಣಿಯೂರು ಘಟನೆ ಖಂಡಿಸಿ ನಾಳೆ ಪ್ರತಿಭಟನೆ: ಎಸ್‌ಡಿಪಿಐ ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿಯಿಂದ ಬೆಂಬಲ

ಪುತ್ತೂರು: ಕಾಣಿಯೂರಿನಲ್ಲಿ ಸಂಘಪರಿವಾರದ ದುಷ್ಕರ್ಮಿಗಳು ಮುಸ್ಲಿಂ ಬೆಡ್‌ಶೀಟ್ ವ್ಯಾಪಾರಿಗಳ ಮೇಲೆ ಅಮಾನವೀಯ ಗುಂಪು ಹಲ್ಲೆ ಹಾಗೂ ಕೊಲೆಯತ್ನ ಪ್ರಕರಣವನ್ನು ಖಂಡಿಸಿ ದ.ಕ ಮುಸ್ಲಿಂ ಯುವಜನ ಪರಿಷತ್, ಪುತ್ತೂರು ವತಿಯಿಂದ ನಾಳೆ ನಡೆಯುವ SDPI ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ.

ಮುಸ್ಲಿಮ್ ವ್ಯಾಪಾರಿಗಳ ಅಮಾನುಷವಾಗಿ ಹಲ್ಲೆ ನಡೆಸಿರುವ ಘಟನೆಯನ್ನು ಖಂಡಿಸಿ ದ.ಕ ಮುಸ್ಲಿಂ ಯುವಜನ ಪರಿಷತ್, ಪುತ್ತೂರು ವತಿಯಿಂದ ನಾಳೆ ಸಂಜೆ 3 ಗಂಟೆಗೆ ದರ್ಬೆ ವೃತ್ತದಿಂದ ಎಸಿ ಕಛೇರಿ ತನಕ ಬೃಹತ್ ಪ್ರತಿಭಟನಾ ರ‍್ಯಾಲಿಯನ್ನು ಹಮ್ಮಿಕೊಂಡಿದೆ. ಈ ಪ್ರತಿಭಟನಾ ರ‍್ಯಾಲಿಗೆ ಎಸ್‌ಡಿಪಿಐ ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿ ಸಂಪೂರ್ಣ ಬೆಂಬಲ ಸೂಚಿಸಿದೆ ಎಂದು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದೆ.

Join Whatsapp
Exit mobile version