Home ಟಾಪ್ ಸುದ್ದಿಗಳು ಮೂರು ಸೇನೆಗಳ ಮುಖ್ಯಸ್ಥರಾಗಿ (ಸಿಡಿಎಸ್) ನಿವೃತ್ತ ಲೆಫ್ಟಿನೆಂಟ್ ಜನರಲ್ ಅನಿಲ್ ಚೌಹಾಣ್ ಅಧಿಕಾರ ಸ್ವೀಕಾರ

ಮೂರು ಸೇನೆಗಳ ಮುಖ್ಯಸ್ಥರಾಗಿ (ಸಿಡಿಎಸ್) ನಿವೃತ್ತ ಲೆಫ್ಟಿನೆಂಟ್ ಜನರಲ್ ಅನಿಲ್ ಚೌಹಾಣ್ ಅಧಿಕಾರ ಸ್ವೀಕಾರ

ನವದೆಹಲಿ: ನಿವೃತ್ತ ಲೆಫ್ಟಿನೆಂಟ್ ಜನರಲ್ ಅನಿಲ್ ಚೌಹಾಣ್ ಅವರು ಭಾರತದ ನೂತನ ರಕ್ಷಣಾ ಸಿಬ್ಬಂದಿ ಮುಖ್ಯಸ್ಥರಾಗಿ (ಸಿಡಿಎಸ್) ಶುಕ್ರವಾರ ಅಧಿಕಾರ ವಹಿಸಿಕೊಂಡರು.

ಹೆಲಿಕಾಪ್ಟರ್ ಅಪಘಾತದಲ್ಲಿ ತಮ್ಮ ಪೂರ್ವಾಧಿಕಾರಿ ಲೆಫ್ಟಿನೆಂಟ್ ಜನರಲ್ ಬಿಪಿನ್ ರಾವತ್ ಅವರ ಅಕಾಲಿಕ ನಿಧನದ ನಂತರ ಡಿಸೆಂಬರ್ 8, 2021 ರಿಂದ ಖಾಲಿ ಇರುವ ಹುದ್ದೆಯನ್ನು ದೇಶದ ಮೂರೂ ಸೇನಾ ಪಡೆಗಳ ಎರಡನೇ  ಮುಖ್ಯಸ್ಥರಾಗಿ ಚೌಹಾಣ್ ತುಂಬಲಿದ್ದಾರೆ.

ಚೌಹಾಣ್ ಅವರನ್ನು ಭಾರತದ ನೂತನ ರಕ್ಷಣಾ ಸಿಬ್ಬಂದಿ ಮುಖ್ಯಸ್ಥರಾಗಿ (ಸಿಡಿಎಸ್) ಸರ್ಕಾರ ಬುಧವಾರ ನೇಮಕ ಮಾಡಿತ್ತು.

ಚೌಹಾಣ್ ಅವರು ಭಾರತ ಸರ್ಕಾರದ ಮಿಲಿಟರಿ ವ್ಯವಹಾರಗಳ ಇಲಾಖೆಯ (ಡಿಎಂಎ) ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಲಿದ್ದಾರೆ.

ಜನರಲ್ ಚೌಹಾಣ್ ಅವರು ಸಿಡಿಎಸ್ ಆಗಿ,  ಸರ್ಕಾರ ಮತ್ತು ಭಾರತೀಯ ಸೇನೆಯ ನಡುವಿನ ಅತ್ಯಂತ ಹಿರಿಯ ಸಂಪರ್ಕವಾಗಲಿದ್ದಾರೆ. ಅವರು ಸರ್ಕಾರದ ಖರೀದಿ, ಸಿಬ್ಬಂದಿ ಮತ್ತು ತರಬೇತಿ ನಿರ್ಧಾರಗಳನ್ನು ನಿರ್ದೇಶಿಸಲಿದ್ದಾರೆ. ಚೀಫ್ಸ್ ಆಫ್ ಸ್ಟಾಫ್ ಕಮಿಟಿ ಮತ್ತು ಇಂಟಿಗ್ರೇಟೆಡ್ ಡಿಫೆನ್ಸ್ ಸ್ಟಾಫ್ ಮುಖ್ಯಸ್ಥರಾಗಿರುತ್ತಾರೆ.

Join Whatsapp
Exit mobile version