Home ಟಾಪ್ ಸುದ್ದಿಗಳು ಆಸ್ಪತ್ರೆಯಲ್ಲಿ ಗುಂಡು ಹಾರಿಸಿದ ಜಾಮಿಯಾ ವಿವಿ ವಿದ್ಯಾರ್ಥಿ

ಆಸ್ಪತ್ರೆಯಲ್ಲಿ ಗುಂಡು ಹಾರಿಸಿದ ಜಾಮಿಯಾ ವಿವಿ ವಿದ್ಯಾರ್ಥಿ

ನವದೆಹಲಿ: ಆಸ್ಪತ್ರೆಯಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಯೊಬ್ಬರ ಮೇಲೆ ಅದೇ ಕಾಲೇಜಿನ ಮತ್ತೊಬ್ಬ ವಿದ್ಯಾರ್ಥಿ ಗುಂಡು ಹಾರಿಸಿರುವ ಘಟನೆ ನಡೆದಿದೆ.


ವಿಶ್ವವಿದ್ಯಾಲಯದ ಗ್ರಂಥಾಲಯದಲ್ಲಿ ಗುರುವಾರ ರಾತ್ರಿ ಎರಡು ವಿದ್ಯಾರ್ಥಿ ಗುಂಪುಗಳ ನಡುವೆ ಗಲಾಟೆ ನಡೆದಿದ್ದು, ಪರಸ್ಪರ ಹೊಡೆದಾಡಿಕೊಂಡಿದ್ದರು. 26 ವರ್ಷದ ನೌಮನ್ ಚೌಧರಿ, ತಲೆಗೆ ಗಂಭೀರವಾದ ಗಾಯವಾಗಿದ್ದು, ಕೂಡಲೇ ಆತನನ್ನು ಹೋಲಿ ಫ್ಯಾಮಿಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆತನ ಆರೋಗ್ಯ ವಿಚಾರಿಸಲು ಚೌಧರಿ ಸ್ನೇಹಿತ ನೌಮನ್ ಅಲಿ ಕೂಡ ಆಸ್ಪತ್ರೆಗೆ ಬಂದಿದ್ದ.

ಈ ವಿಚಾರ ತಿಳಿದ ಎದುರಾಳಿ ಗುಂಪಿನ ವಿದ್ಯಾರ್ಥಿ ಹರಿಯಾಣದ ಮೇವಾತ್ ನ ಜಲಾಲ್ ತನ್ನ ಸ್ನೇಹಿತರೊಂದಿಗೆ ಗುಂಪು ಕಟ್ಟಿಕೊಂಡು ಆಸ್ಪತ್ರೆಯಲ್ಲಿ ದಾಳಿ ನಡೆಸಿದ್ದು, ನೌಮನ್ ಅಲಿ ಮೇಲೆ ಗುಂಡು ಹಾರಿಸಿದ್ದಾನೆ. ಘಟನೆಯಲ್ಲಿ ನೌಮನ್ ಅಲಿ ಹಣೆ ಭಾಗದಲ್ಲಿ ಗಾಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.


ನೌಮನ್ ಅಲಿ ಹೇಳಿಕೆ ಆಧರಿಸಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Join Whatsapp
Exit mobile version