ಉಚಿತ ನೀರು ಕೊಡದ ರೆಸ್ಟೋರೆಂಟ್​ಗೆ ಜಿಲ್ಲಾ ಗ್ರಾಹಕ ಆಯೋಗದಿಂದ ದಂಡ

Prasthutha|

ಹೈದರಾಬಾದ್: ಗ್ರಾಹಕರಿಗೆ ಉಚಿತ ನೀರು ಕೊಡದ ರೆಸ್ಟೋರೆಂಟ್​ಗೆ ಜಿಲ್ಲಾ ಗ್ರಾಹಕ ಆಯೋಗ ಶಾಕ್ ನೀಡಿದ ಘಟನೆ ಹೈದರಾಬಾದ್​ನಲ್ಲಿ ನಡೆದಿದೆ.

- Advertisement -

ಸಿಕಂದರಾಬಾದ್‌ನ ವ್ಯಕ್ತಿಯೊಬ್ಬರು ಊಟ ಮಾಡಲು ರೆಸ್ಟೋರೆಂಟ್‌ಗೆ ತೆರಳಿದ್ದರು. ಊಟವಾದ ಬಳಿಕ ಹೋಟೆಲ್ ಸಿಬ್ಬಂದಿಗೆ ಪ್ಲಾಸ್ಟಿಕ್ ವಾಟರ್ ಬಾಟಲ್ ಬದಲು ಮಗ್​ನಲ್ಲಿ ನೀರು ನೀಡುವಂತೆ ಕೇಳಿದರು. ಆದರೆ, ರೆಸ್ಟೋರೆಂಟ್ ಸಿಬ್ಬಂದಿ 1 ಲೀಟರ್​ ವಾಟರ್ ಬಾಟಲ್ ನೀಡಿ 50 ರೂ. ಬಿಲ್​ ನೀಡಿದ್ದಾನೆ. ಇದರಿಂದ ರೆಸ್ಟೋರೆಂಟ್ ಆಡಳಿತ ಮಂಡಳಿ ವಿರುದ್ಧ ಅಸಮಾಧಾನಗೊಂಡ ಗ್ರಾಹಕ, ಈ ಸಂಬಂಧ ಗ್ರಾಹಕ ಆಯೋಗಕ್ಕೆ ದೂರು ನೀಡಿದ್ದರು.

ಈ ಕುರಿತು ತನಿಖೆ ನಡೆಸಿದ ಗ್ರಾಹಕ ಆಯೋಗ ರೆಸ್ಟೋರೆಂಟ್​ಗೆ 5,000 ರೂ. ದಂಡ ವಿಧಿಸಿದೆ. ಅಲ್ಲದೆ, ವ್ಯಾಜ್ಯ ಶುಲ್ಕವಾಗಿ ಗ್ರಾಹಕನಿಗೆ 1,000 ರೂಪಾಯಿ ಪಾವತಿಸುವಂತೆ ಆದೇಶಿಸಿದೆ. ಅಲ್ಲದೆ, ನೀರಿನ ಬಾಟಲಿಗೆ ತೆಗೆದುಕೊಂಡಿದ್ದ 50 ರೂ.ಗಳನ್ನು ಹಿಂದಿರುಗಿಸುವಂತೆ ಜಿಲ್ಲಾ ಗ್ರಾಹಕ ಆಯೋಗ ರೆಸ್ಟೋರೆಂಟ್‌ಗೆ ಆದೇಶಿಸಿದೆ.

Join Whatsapp
Exit mobile version