ಮಂಗಳೂರು: ಲೋಕಸಭಾ ಚುನಾವಣೆಗೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಒಬ್ಬ ಅಭ್ಯರ್ಥಿ ನಾಮಪತ್ರ ಹಿಂಪಡೆದಿದ್ದಾರೆ. ಈ ಮೂಲಕ ಒಟ್ಟು ಒಂಬತ್ತು ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿ ಉಳಿದಿದ್ದಾರೆ.
ದಕ್ಷಿಣ ಕನ್ನಡ ಲೋಕ ಸಭಾ ಕ್ಷೇತ್ರದಲ್ಲಿ 11 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಪಕ್ಷೇತರ ಅಭ್ಯರ್ಥಿಗಳ ಪೈಕಿ ಫ್ರಾನ್ಸಿಸ್ ಲ್ಯಾನ್ಸಿ ಮಾಡ್ತಾ ಎಂಬವರ ನಾಮಪತ್ರ ತಿರಸ್ಕೃತಗೊಂಡಿತ್ತು. ಓರ್ವರು ನಾಮಪತ್ರ ಹಿಂದೆಗೆದುಕೊಂಡಿದ್ದಾರೆ.
ಬಿಜೆಪಿಯಿಂದ ಕ್ಯಾ.ಬ್ರಿಜೇಶ್ ಚೌಟ, ಕಾಂಗ್ರೆಸ್‌ನಿಂದ ಆರ್. ಪದ್ಮರಾಜ್ , ಬಹುಜನ ಸಮಾಜ ಪಕ್ಷದಿಂದ ಕಾಂತಪ್ಪ ಅಲಂಗಾರ್, ಕರ್ನಾಟಕ ರಾಷ್ಟ್ರ ಸಮಿತಿಯಿಂದ ರಂಜಿನಿ ಎಂ., ಉತ್ತಮ ಪ್ರಜಾಕೀಯ ಪಕ್ಷದಿಂದ ಕೆ.ಇ. ಮನೋಹರ, ಕರುನಾಡ ಸೇವಕ ಪಕ್ಷದಿಂದ ದುರ್ಗಾಪ್ರಸಾದ್, ಪಕ್ಷೇತರರಾಗಿ ದೀಪಕ್ ರಾಜೇಶ್ ಕುವೆಲ್ಲೊ, ಮೆಕ್ಸಿಂ ಪಿಂಟೊ ಹಾಗೂ ಸುಪ್ರೀತ್ ಕುಮಾರ್ ಪೂಜಾರಿ ದಕ್ಷಿಣ ಕನ್ನಡ ಲೋಕ ಸಭಾ ಕ್ಷೇತ್ರದ ಕಣದಲ್ಲಿ ಇದ್ದಾರೆ.
ರಾಜ್ಯದ ಮೊದಲ ಹಂತದ ಲೋಕಸಭಾ ಚುನಾವಣೆ ಕಣದಲ್ಲಿ ಒಟ್ಟು 247 ಅಭ್ಯರ್ಥಿಗಳಿದ್ದಾರೆ. ಇವರಲ್ಲಿ 226 ಪುರುಷ ಅಭ್ಯರ್ಥಿಗಳು ಹಾಗೂ 21 ಮಹಿಳಾ ಅಭ್ಯರ್ಥಿಗಳು.
ಮೊದಲ ಹಂತದ ಲೋಕಸಭಾ ಯಾವ ಕ್ಷೇತ್ರದಲ್ಲಿ ಎಷ್ಟು ಅಭ್ಯರ್ಥಿಗಳು ಕಣದಲ್ಲಿದ್ದಾರೆ?
ಉಡುಪಿ-ಚಿಕ್ಕಮಗಳೂರು: 10
ಹಾಸನ: 15
ದಕ್ಷಿಣ ಕನ್ನಡ: 9
ಚಿತ್ರದುರ್ಗ: 20
ತುಮಕೂರು: 18
ಮಂಡ್ಯ: 14
ಮೈಸೂರು: 18
ಚಾಮರಾಜನಗರ: 14
ಬೆಂಗಳೂರು ಗ್ರಾಮೀಣ: 15
ಬೆಂಗಳೂರು ಉತ್ತರ: 21
ಬೆಂಗಳೂರು ಕೇಂದ್ರ: 24
ಬೆಂಗಳೂರು ದಕ್ಷಿಣ: 22
ಚಿಕ್ಕಬಳ್ಳಾಪುರ: 29
ಕೋಲಾರ: 18