Home ಟಾಪ್ ಸುದ್ದಿಗಳು ಬಹುಮತ ಸಾಬೀತುಪಡಿಸುವಲ್ಲಿ ವಿಫಲ| ಸ್ವೀಡಿಷ್ ಪ್ರಧಾನಿ ಸ್ಟೀಫನ್ ಲೋಫ್ವಾನ್ ರಾಜೀನಾಮೆ

ಬಹುಮತ ಸಾಬೀತುಪಡಿಸುವಲ್ಲಿ ವಿಫಲ| ಸ್ವೀಡಿಷ್ ಪ್ರಧಾನಿ ಸ್ಟೀಫನ್ ಲೋಫ್ವಾನ್ ರಾಜೀನಾಮೆ

ಸ್ವೀಡನ್: ಬಹುಮತ ಸಾಬೀತುಪಡಿಸುವಲ್ಲಿ ವಿಫಲರಾದ ಸ್ವೀಡಿಷ್ ಪ್ರಧಾನಿ ಸ್ಟೀಫನ್ ಲೋಫ್ವಾನ್ ಇಂದು ರಾಜೀನಾಮೆ ನೀಡಿದ್ದಾರೆ.

ಜೂನ್ 21ರಂದು ನಡೆದ ವಿಶ್ವಾಸಮತ ಕಳೆದುಕೊಂಡ ಸೋಷಿಯಲ್ ಡೆಮಾಕ್ರಾಟ್ ನಾಯಕ ಲೋಫ್ವಾನ್ ಅವರಿಗೆ ರಾಜೀನಾಮೆ ನೀಡಲು ಅಥವಾ ತ್ವರಿತ ಚುನಾವಣೆಯನ್ನು ಕರೆಯಲು ಸೋಮವಾರ ಮಧ್ಯರಾತ್ರಿಯವರೆಗೆ ಗಡುವು ನೀಡಲಾಗಿತ್ತು. ಆದರೆ ಎಡಪಂಥೀಯರು ತಮ್ಮ ಬೆಂಬಲವನ್ನು ಹಿಂತೆಗೆದುಕೊಳ್ಳುತ್ತಿದ್ದಂತೆ, ಅಧಿಕಾರಕ್ಕೆ ಮರಳುವ ಲೋಫ್ವೆನ್ ಅವರ ಕನಸಿಗೆ ತಣ್ಣೀರೆರಚಿದಂತಾಗಿದೆ.

“ನಾನು ಪ್ರಧಾನ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ಇದು ನಾನು ತೆಗೆದುಕೊಳ್ಳುತ್ತಿರುವ ಅತ್ಯಂತ ಕಠಿಣ ರಾಜಕೀಯ ನಿರ್ಧಾರವಾಗಿದೆ’ ಎಂದು ತುರ್ತು ಪತ್ರಿಕಾಗೋಷ್ಠಿಯಲ್ಲಿ ಲೋಫ್ವಾನ್ ಹೇಳಿದರು.

Join Whatsapp
Exit mobile version