Home ಟಾಪ್ ಸುದ್ದಿಗಳು ನನ್ನ ಹೆಸರಿಲ್ಲದ ಶಿಲಾಫಲಕ ಕೂಡಲೇ ಬದಲಾಯಿಸಿ: ಸಚಿವ ವಿ. ಸೋಮಣ್ಣ ಗರಂ

ನನ್ನ ಹೆಸರಿಲ್ಲದ ಶಿಲಾಫಲಕ ಕೂಡಲೇ ಬದಲಾಯಿಸಿ: ಸಚಿವ ವಿ. ಸೋಮಣ್ಣ ಗರಂ

ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಲಿರುವ ಬೇಸ್ ಕ್ಯಾಂಪಸ್ ನ 150 ಮೇಲ್ದರ್ಜೆಗೇರಿಸಲ್ಪಟ್ಟ ಐಟಿಐಗಳ ಲೋಕಾರ್ಪಣೆ ಶಿಲಾ ಫಲಕದಲ್ಲಿ ತಮ್ಮ ಹೆಸರಿಲ್ಲದಿರುವುದಕ್ಕೆ ಸಚಿವ ಮತ್ತು ಗೋವಿಂದರಾಜನಗರ ಶಾಸಕ ವಿ. ಸೋಮಣ್ಣ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಬೇಸ್ ಕ್ಯಾಂಪಸ್ ನಲ್ಲಿ ಕಾರ್ಯಕ್ರಮದ ಸಿದ್ಧತೆಗೆ ತೆರಳಿದ್ದ ವೇಳೆ ಮಾತನಾಡಿದ ಶಾಸಕ ವಿ. ಸೋಮಣ್ಣ, ನಮ್ಮ ಕ್ಷೇತ್ರದಲ್ಲೇ ಬೇಸ್ ಕ್ಯಾಂಪಸ್ ಬರಲಿದೆ. ಪ್ರಧಾನಿ ಭಾಗವಹಿಸುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿರುವ ನನ್ನ ಹೆಸರೇ ಶಿಲಾ ಫಲಕದಲ್ಲಿ ಇಲ್ಲ ಅಂದರೆ ಹೇಗೆ? ಇದೆಲ್ಲಾ ರಾಜ್ಯ ಸರ್ಕಾರದ ದುಡ್ಡು, ಕೇಂದ್ರ ಸರ್ಕಾರದ್ದಲ್ಲ. ಅವರು ಹೆದರಿಸುತ್ತಾರೆ ಅಂತಾ ನೀವೆಲ್ಲಾ ಹೆದರಿಕೊಂಡು ಕುಳಿತುಕೊಳ್ಳುತ್ತೀರಾಕೂಡಲೇ ಶಿಲಾಫಲಕ ಬದಲಾಯಿಸಿ. ಇಲ್ಲದಿದ್ದರೆ ನಾಳೆ ಬೆಳಗ್ಗೆಯೇ ಒಡೆದು ಹಾಕುತ್ತೇನೆ ಎಂದು ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪ್ರದೀಪ್ ಜೊತೆ ಗರಂ ಆದರು.

ಸದ್ಯ ಶಿಲಾಫಲಕದಲ್ಲಿ ಪ್ರಧಾನಿ ನರೇಂದ್ರ ಮೋದಿ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ ಹೆಸರು ಮಾತ್ರ ಉಲ್ಲೇಖವಾಗಿದೆ.

Join Whatsapp
Exit mobile version