Home ಟಾಪ್ ಸುದ್ದಿಗಳು ನೂರನೇ ವರ್ಷಕ್ಕೆ ಕಾಲಿಟ್ಟ ಮೋದಿ ತಾಯಿ : ಫೋಟೋ ಕ್ಲಿಕ್ಕಿಸಿ, ಟ್ವೀಟ್ ಮಾಡಿ ವಾಪಸ್ಸಾದ ಪ್ರಧಾನಿ

ನೂರನೇ ವರ್ಷಕ್ಕೆ ಕಾಲಿಟ್ಟ ಮೋದಿ ತಾಯಿ : ಫೋಟೋ ಕ್ಲಿಕ್ಕಿಸಿ, ಟ್ವೀಟ್ ಮಾಡಿ ವಾಪಸ್ಸಾದ ಪ್ರಧಾನಿ

ಗಾಂಧಿನಗರ: 1923ರ ಜೂನ್ 18ರಂದು ಜನಿಸಿದ ಪ್ರಧಾನಿ ಮೋದಿ ಅವರ ತಾಯಿ ಹೀರಾಬೆನ್ ಇಂದು 100ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಪ್ರಧಾನಿ ಮೋದಿ ಅವರ ತಾಯಿಯ ಜನ್ಮದಿನದ ಹಿನ್ನೆಲೆಯಲ್ಲಿ ಮೋದಿ ಅವರು ಇಂದು ಬೆಳಿಗ್ಗೆ ಗುಜರಾತ್​​ನ ಗಾಂಧಿನಗರಕ್ಕೆ ಭೇಟಿ ನೀಡಿದ್ದಾರೆ

100ನೇ ವರ್ಷಕ್ಕೆ ಕಾಲಿಟ್ಟಿರುವ ತಮ್ಮ ತಾಯಿ ಹೀರಾಬೆನ್ ಮೋದಿ ಅವರ ಹುಟ್ಟುಹಬ್ಬಕ್ಕೆ ಶುಭ ಹಾರೈಸಿದ ಮೋದಿ ತಾಯಿಯ ಜೊತೆಯಲ್ಲಿ ಕೆಲಕಾಲ ಕಳೆದ ಅದಾದ ಬಳಿಕ ಪಾವಗಢದ ದೇವಾಲಯಕ್ಕೆ ಭೇಟಿ ನೀಡಿ, ನಂತರ ವಡೋದರಾದಲ್ಲಿ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲು ಅಲ್ಲಿಂದ ತೆರಳಿದ್ದಾರೆ

ನಿನ್ನೆಯಿಂದ 2 ದಿನಗಳ ಗುಜರಾತ್ ಪ್ರವಾಸದಲ್ಲಿರುವ ನರೇಂದ್ರ ಮೋದಿ ಇಂದು ತಾಯಿಯನ್ನು ಭೇಟಿ ಮಾಡಿ ಫೋಟೋ ಕ್ಲಿಕ್ಕಿಸಿ ಆಮೇಲೆ ಮೊಬೈಲನ್ನೇ ಬಳಸದ ತಾಯಿಗೆ ಟ್ವಿಟರಲ್ಲಿ ಶುಭ ಹಾರೈಸಿ ವಾಪಾಸಾಗಿದ್ದಾರೆ.

Join Whatsapp
Exit mobile version