ಆಸ್ಪತ್ರೆಗಳಲ್ಲಿ ವಿವಾಹಿತ ಮಹಿಳೆಯ ನಿರಂತರ ಅತ್ಯಾಚಾರ: ಆರೋಪಿ ಬಂಧನ

Prasthutha|

ಮಂಗಳೂರು: ನಗರದ ಆಸ್ಪತ್ರೆಗಳಲ್ಲಿ ವಿವಾಹಿತ ಮಹಿಳೆಯನ್ನು ಬ್ಲಾಕ್‌ಮೇಲ್ ಮಾಡಿ ನಿರಂತರ ಅತ್ಯಾಚಾರ ಎಸಗಿದ ಆರೋಪಿ ಕೇರಳದ ಹೊಸದುರ್ಗ ಪುಲ್ಲೂರು ಗ್ರಾಮದ ಸುಜಿತ್‌ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

- Advertisement -

ಕಾಸರಗೋಡಿನ ಮಹಿಳೆ ಚಿಕಿತ್ಸೆಗೆಂದು ಬರುವಾಗ ಆಕೆಯ ಜೊತೆ ಬಂದ ಪರಿಚಿತನೇ ಆಸ್ಪತ್ರೆಯಲ್ಲಿ ಹಾಗೂ ಆ ಬಳಿಕ ವಸತಿಗೃಹಕ್ಕೆ ಕರೆದೊಯ್ದು ಅತ್ಯಾಚಾರ ನಡೆಸಿದ್ದಾನೆ ಎಂದು ದೂರು ದಾಖಲಾಗಿದೆ.

ಕಾಸರಗೋಡಿನಲ್ಲಿ ಜಿಮ್‌ಗೆ ಹೋಗುತ್ತಿದ್ದ ಮಹಿಳೆಗೆ ಜಿಮ್‌ ಟ್ರೈನರ್‌ ಸುಜಿತ್‌ ಪರಿಚಯವಾಗಿತ್ತು. ಮಹಿಳೆಗೆ ಫಿಸ್ತುಲ ಕಾಯಿಲೆಯಿದ್ದು, ಚಿಕಿತ್ಸೆಗೆಂದು ನಗರದ ಆಸ್ಪತ್ರೆಗೆ ಕಳೆದ ಮಾರ್ಚ್‌ ತಿಂಗಳಲ್ಲಿ ಬಂದು ದಾಖಲಾಗಿದ್ದರು. ಅಲ್ಲಿ ರಾತ್ರಿ ಮಹಿಳೆಯ ಒಪ್ಪಿಗೆಯಿಲ್ಲದೆ ಸುಜಿತ್‌ ಅತ್ಯಾಚಾರ ಎಸಗಿ, ಆಕೆಯ ನಗ್ನ ಫೂಟೊಗಳನ್ನೂ ತೆಗೆದಿದ್ದನು. ಬಳಿಕ ಏಪ್ರಿಲ್‌ ತಿಂಗಳಲ್ಲಿ ನಗ್ನ ಫೂಟೊಗಳನ್ನು ತೋರಿಸಿ ಮಂಗಳೂರಿಗೆ ಒತ್ತಾಯಿಸಿ ಕರೆತಂದಿದ್ದ. ನಾಲ್ಕು ದಿನಗಳ ಕಾಲ ನಗರದ ಹೋಟೆಲ್‌ನಲ್ಲಿ ಬೆದರಿಸಿ ಅತ್ಯಾಚಾರ ಮಾಡಿ ಫೂಟೊ ತೆಗೆದಿದ್ದಾನೆ ದೂರಿನಲ್ಲಿ ಉಲ್ಲೇಖವಾಗಿದೆ.

- Advertisement -

ಮಹಿಳೆಗೆ ಫುಡ್‌ ಪಾಯ್ಸನ್‌ ಆಗಿದ್ದು ಆ ಬಳಿಕ ನಗರದ ಇನ್ನೊಂದು ಖಾಸಗಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದರು. ಆಗಲೂ ಅಲ್ಲಿ ಮಹಿಳೆ ಮೇಲೆ ಅತ್ಯಾಚಾರ ಎಸಗಿ, ಯಾರಿಗಾದರೂ ತಿಳಿಸಿದರೆ ಕೊಲ್ಲುವುದಾಗಿ ಬೆದರಿಕೆಯೊಡ್ಡಿದ್ದಾನೆ ಎಂದೂ ದೂರಿನಲ್ಲಿ ತಿಳಿಸಲಾಗಿದೆ

ಕೊನೆಗೆ ಮಹಿಳೆ ಕದ್ರಿ ಠಾಣೆಗೆ ದೂರು ನೀಡಿದ್ದು, ಕಲಂ 376, 506 ಹಾಗೂ ಐಪಿಸಿ 149ರಂತೆ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.



Join Whatsapp
Exit mobile version