ಪ.ಬಂಗಾಳ, ಹರಿಯಾಣ, ಉತ್ತರಾಖಂಡದಲ್ಲಿ CAA ಪೌರತ್ವ ನೀಡಲು ಆರಂಭ: ಗೃಹ ಸಚಿವಾಲಯ

Prasthutha|

ನವದೆಹಲಿ: ಪಶ್ಚಿಮ ಬಂಗಾಳ, ಹರಿಯಾಣ ಮತ್ತು ಉತ್ತರಾಖಂಡದಲ್ಲಿ ಸಿಎಎ ಅಡಿಯಲ್ಲಿ ಅರ್ಜಿದಾರರಿಗೆ ಪೌರತ್ವ ನೀಡಲು ಕೇಂದ್ರ ಸರ್ಕಾರ ಆರಂಭಿಸಿದೆ ಎಂದು ಗೃಹ ಸಚಿವಾಲಯ ತಿಳಿಸಿದೆ.

- Advertisement -

ದೆಹಲಿಯ ಕೇಂದ್ರ ಸಮಿತಿಯ ಶಿಫಾರಸಿನಂತೆ ದೆಹಲಿಯಲ್ಲಿ ಪೌರತ್ವ ಪ್ರಮಾಣಪತ್ರಗಳ ಮೊದಲ ಪ್ರತಿಯನ್ನು ಕೇಂದ್ರ ಗೃಹ ಕಾರ್ಯದರ್ಶಿ ಮೇ 15ರಂದು ಅರ್ಜಿದಾರರಿಗೆ ಹಸ್ತಾಂತರಿಸಿದ್ದರು.

ಡಿಸೆಂಬರ್ 31, 2014ಕ್ಕಿಂತ ಮೊದಲು ಭಾರತಕ್ಕೆ ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಿಂದ ಬಂದ ಹಿಂದೂ, ಸಿಖ್, ಜೈನ್, ಬೌದ್ಧ, ಪಾರ್ಸಿ ಮತ್ತು ಕ್ರಿಶ್ಚಿಯನ್ ವಲಸಿಗರಿಗೆ ಭಾರತೀಯ ರಾಷ್ಟ್ರೀಯತೆಯನ್ನು ನೀಡಲು CAA ವಿಧೇಯಕವನ್ನು ಡಿಸೆಂಬರ್ 2019 ರಲ್ಲಿ ಜಾರಿಗೊಳಿಸಲಾಗಿದೆ.



Join Whatsapp
Exit mobile version