ಬೆಂಗಳೂರು: ಶಿಕ್ಷಕರ ನೇಮಕಾತಿ ಹಗರಣವನ್ನು ಬಯಲಿಗೆಳೆದಿದ್ದ ಪತ್ರಕರ್ತನಿಗೆ ಪೊಲೀಸರು ನೋಟಿಸ್ ಕಳುಹಿಸಿರುವುದಾಗಿ ವರದಿಯಾಗಿದೆ.
‘ದಿ ಫೈಲ್’ ತನಿಖಾ ವೆಬ್ಸೈಟ್ ನ ಸಂಪಾದಕ, ಪತ್ರಕರ್ತ ಜಿ ಮಹಾಂತೇಶ್ ಅವರಿಗೆ, ‘ಸುದ್ದಿಯ ಮೂಲ’ವನ್ನು ನೀಡುವಂತೆ ಜ.5ರಂದು ಬೆಂಗಳೂರು ಪೊಲೀಸರು ನೋಟಿಸ್ ಕಳುಹಿಸಿದ್ದಾರೆ.
ಶಿಕ್ಷಕರ ನೇಮಕಾತಿ ಹಗರಣದ ಆರೋಪಿ ಮಾದೇಗೌಡ ಸೇರಿ ಮೂವರು ಅಧಿಕಾರಿಗಳನ್ನು ಮರಳಿ ಕರ್ತವ್ಯಕ್ಕೆ ತೆಗೆದುಕೊಳ್ಳುವ ಪ್ರಸ್ತಾವನೆಯ ಬಗ್ಗೆ ‘ದಿ ಫೈಲ್’ 2022ರ ನ.10ರಂದು ವರದಿ ಪ್ರಕಟಿಸಿತ್ತು.
ಈ ವರದಿಗೆ ಸಂಬಂಧಿಸಿ ಜ.5ರಂದು ಪೊಲೀಸರು ನೋಟಿಸ್ ಕಳುಹಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ‘ದಿ ಫೈಲ್’ ಸಂಪಾದಕ, ಜಿ ಮಹಾಂತೇಶ್, “ಸುದ್ದಿಯ ಮೂಲವನ್ನು ಬಿಟ್ಟು ಕೊಡುವುದು ಪತ್ರಿಕಾ ಧರ್ಮವಲ್ಲ. ಒಂದು ವೇಳೆ ಅದು ಬಿಟ್ಟುಕೊಟ್ಟರೆ ಪತ್ರಿಕಾ ವೃತ್ತಿಗೆ ಮಾಡುವ ಅವಮಾನ” ಎಂದು ಹೇಳಿದ್ದಾರೆ.
ಶಿಕ್ಷಕರ ನೇಮಕಾತಿ ಹಗರಣದಲ್ಲಿ ಆರೋಪಿ ಮಾದೇಗೌಡ ಸೇರಿ ಮೂವರು ಅಧಿಕಾರಿಗಳು ಸಿಐಡಿಯಿಂದ ಬಂಧನಕ್ಕೆ ಒಳಗಾಗಿ, ಅಮಾನತುಗೊಂಡಿದ್ದರು.