ನೋಟಿನಲ್ಲಿ ಲಕ್ಷ್ಮೀ, ಗಣೇಶ ಫೋಟೋ ಮುದ್ರಿಸಬೇಕು ಎಂದ ಕೇಜ್ರಿವಾಲ್ ರನ್ನು ತರಾಟೆಗೆ ತೆಗೆದುಕೊಂಡ RBI

Prasthutha|

  • ‘ಕೇಜ್ರಿವಾಲ್ ಅತ್ಯಂತ ಕೀಳು ಮಟ್ಟದ ರಾಜಕೀಯ ಮಾಡುತ್ತಿದ್ದಾರೆ’

ನವದೆಹಲಿ: ಭಾರತೀಯ ಕರೆನ್ಸಿ ನೋಟಿನಲ್ಲಿ ಹಿಂದೂ ದೇವರುಗಳ ಫೋಟೋವನ್ನು ಮುದ್ರಿಸಬೇಕೆಂದು ಬೇಡಿಕೆಯಿಟ್ಟು, ಪ್ರಧಾನಿಗೆ ಪತ್ರ ಬರೆದಿದ್ದ ಆಮ್ ಆದ್ಮಿ ನಾಯಕ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ ಬಿ ಐ) ಅಸಮಾಧಾನ ವ್ಯಕ್ತಪಡಿಸಿದೆ.

- Advertisement -

ಈ ಬಗ್ಗೆ ಪ್ರತಿಕ್ರಿಯಿಸಿರುವ ಆರ್ ಬಿ ಐ, ಅರವಿಂದ್ ಕೇಜ್ರಿವಾಲ್ ಅವರು ಅತ್ಯಂತ ಕಳಪೆ ಮತ್ತು ಕೀಳು ಮಟ್ಟದ ರಾಜಕಾರಣವನ್ನು ಮಾಡುತ್ತಿದ್ದಾರೆ ಎಂದು ಹೇಳಿದೆ.

ಭಾರತೀಯರು ಹಣವನ್ನು ಪವಿತ್ರವಾಗಿಯೇ ಕಾಣುತ್ತಾರೆ. ಅದರ ಮೇಲೆ ಲಕ್ಷ್ಮಿ ದೇವಿಯ ಚಿತ್ರಗಳನ್ನು ಮುದ್ರಿಸುವುದರಿಂದ ಭಾರತೀಯರಿಗೆ ಕರೆನ್ಸಿ ಇನ್ನೂ ವಿಶೇಷವಾಗಿ ಹೆಚ್ಚು ಪವಿತ್ರವಾಗುವುದಿಲ್ಲ. ಆರ್ಥಿಕ ಸಂಕಷ್ಟಗಳನ್ನು ತಡೆಯಲು ಇಂತಹ ಸಲಹೆ ನೀಡುವುದು ಮೂರ್ಖತನದ ಸಲಹೆ. ಈ ಮೂಲಕ ಕೇಜ್ರಿವಾಲ್ ಕೀಳು ಮಟ್ಟದ ರಾಜಕೀಯ ಮಾಡುತ್ತಿದ್ದಾರೆ ಎಂದು ಆರ್‌ಬಿಐ ಕೇಂದ್ರೀಯ ಮಂಡಳಿ ನಿರ್ದೇಶಕ ಎಸ್. ಗುರುಮೂರ್ತಿ ಅವರು ಹೇಳಿದ್ದಾರೆ.

- Advertisement -

ನೋಟಿನಲ್ಲಿ ಹಿಂದೂ ಧರ್ಮದವರು ಪೂಜಿಸುವ ಲಕ್ಷ್ಮೀ ಮತ್ತು ಗಣೇಶ ದೇವರುಗಳ ಛಾಯಾ ಚಿತ್ರಗಳನ್ನು ಮುದ್ರಿಸುವ ಮೂಲಕ ಚಾಲ್ತಿಗೆ ತರಬೇಕೆಂದು ಒತ್ತಾಯಿಸಿ ಪ್ರಧಾನಿ ಮೋದಿಗೆ ಕೇಜ್ರಿವಾಲ್ ಪತ್ರ ಬರೆದಿದ್ದರು.

ಪತ್ರದಲ್ಲಿ ಅಪಮೌಲ್ಯೀಕರಣವನ್ನು ಇಲ್ಲದಂತಾಗಿಸಲು ದೇವರ ಫೋಟೋಗಳನ್ನು ಮುದ್ರಿಸುವ ಮೂಲಕ ಪರಿಹಾರ ಕಂಡುಕೊಳ್ಳಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದೀಗ ಈ ನಡೆಯ ವಿರುದ್ಧ ಆರ್ ಬಿ ಐ ಛೀಮಾರಿ ಹಾಕಿದೆ.

Join Whatsapp
Exit mobile version