Home ಟಾಪ್ ಸುದ್ದಿಗಳು ಸೀಝ್ ಮಾಡಿದ 580 ಕೆಜಿ ಗಾಂಜಾವನ್ನು ಇಲಿಗಳು ಭಕ್ಷಿಸಿವೆ: ಕೋರ್ಟ್’ಗೆ ಉತ್ತರಪ್ರದೇಶ ಪೊಲೀಸರ ಮಾಹಿತಿ!

ಸೀಝ್ ಮಾಡಿದ 580 ಕೆಜಿ ಗಾಂಜಾವನ್ನು ಇಲಿಗಳು ಭಕ್ಷಿಸಿವೆ: ಕೋರ್ಟ್’ಗೆ ಉತ್ತರಪ್ರದೇಶ ಪೊಲೀಸರ ಮಾಹಿತಿ!

ಲಕ್ನೋ: ನಾವು ಸೀಝ್ ಮಾಡಿದ್ದ 500 ಕೆಜಿಗೂ ಹೆಚ್ಚು ಗಾಂಜಾವನ್ನು ಇಲಿಗಳು ತಿಂದು ಹಾಕಿವೆ ಎಂದು ಎನ್ಡಿಪಿಎಸ್ ಕೋರ್ಟ್ ಗೆ ಉತ್ತರ ಪ್ರದೇಶದ ಮಥುರಾ ಪೊಲೀಸರು ವರದಿ ನೀಡಿದ್ದಾರೆ.


ಪ್ರಕರಣವೊಂದರಲ್ಲಿ ವಶಪಡಿಸಿಕೊಂಡ ಗಾಂಜಾವನ್ನು ಹಾಜರುಪಡಿಸುವಂತೆ ನ್ಯಾಯಾಲಯ ಪೊಲೀಸರಿಗೆ ಸೂಚಿಸಿತ್ತು. ಈ ಆದೇಶಕ್ಕೆ ಪ್ರತಿಯಾಗಿ ಪೊಲೀಸರು ಈ ವರದಿ ಸಲ್ಲಿಸಿದ್ದಾರೆ. ಪ್ರಕರಣ ಸಂಬಂಧ ಮಾಹಿತಿ ನೀಡಿದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ರಣ್ವೀರ್ ಸಿಂಗ್, ಶೇರ್ ಗಢ ಹಾಗೂ ಹೆದ್ದಾರಿ ಪೊಲೀಸ್ ಠಾಣೆಗಳು ಗೋಡೌನ್ ಗಳಲ್ಲಿ ಶೇಖರಿಸಿಟ್ಟಿದ್ದ 581 ಕೆಜಿ ಗಾಂಜಾವನ್ನು ಇಲಿಗಳು ತಿಂದು ಹಾಕಿವೆ. ಆ ಪ್ರದೇಶಗಳಲ್ಲಿ ಸಂಗ್ರಹಿಸಿದ ವಸ್ತುಗಳನ್ನು ರಕ್ಷಿಸುವುದು ಕಷ್ಟ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಹೇಳಿಕೆ ಸಂಬಂಧ ಸಾಕ್ಷ್ಯ ನೀಡಲು ಕೋರ್ಟ್ ಆದೇಶ ನೀಡಿದೆ. ನವೆಂಬರ್ 26 ರಂದು ಮುಂದಿನ ವಿಚಾರಣೆ ನಡೆಯಲಿದೆ.

ಈ ಪ್ರಕರಣ ಸಂಬಂಧ ವಿಚಾರಣೆ ನಡೆಸುತ್ತಿರುವ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರು ಮಥುರಾ ಎಸ್ ಎಸ್ಪಿ ಅಭಿಷೇಕ್ ಅವರಿಗೆ ಇಲಿ ಕಾಟ ನಿವಾರಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದು, 60 ಲಕ್ಷ ರೂಪಾಯಿ ಮೌಲ್ಯದ 581 ಕೆಜಿ ಗಾಂಜಾವನ್ನು ವಾಸ್ತವವಾಗಿ ಇಲಿಗಳೇ ಸೇವಿಸಿಸುವುದಕ್ಕೆ ಸೂಕ್ತ ಪುರಾವೆ ನೀಡುವಂತೆ ಆದೇಶಿಸಿದ್ದಾರೆ.

Join Whatsapp
Exit mobile version