Home Uncategorized ಸಾಕು ನಾಯಿಗೋಸ್ಕರ ಬ್ರಿಟನ್ ರಾಜಮನೆತನದ ಪ್ರತಿಷ್ಠಿತ ಪ್ರಶಸ್ತಿ ತಿರಸ್ಕರಿಸಿದ್ದ ರತನ್ ಟಾಟಾ..!

ಸಾಕು ನಾಯಿಗೋಸ್ಕರ ಬ್ರಿಟನ್ ರಾಜಮನೆತನದ ಪ್ರತಿಷ್ಠಿತ ಪ್ರಶಸ್ತಿ ತಿರಸ್ಕರಿಸಿದ್ದ ರತನ್ ಟಾಟಾ..!

ಮುಂಬೈ: ಕೈಗಾರಿಕೋದ್ಯಮಿ ರತನ್ ಟಾಟಾ ಮುಂಬೈನಲ್ಲಿ ರಾತ್ರಿ ನಿಧನರಾಗಿದ್ದಾರೆ. ಬ್ರಿಟನ್ ನ ರಾಜಮನೆತನ ನೀಡುವ ಪ್ರತಿಷ್ಠಿತ ಪ್ರಶಸ್ತಿಯನ್ನು ಅಂದು ತಮ್ಮ ಸಾಕು ನಾಯಿಗೋಸ್ಕರ ತಿರಸ್ಕರಿಸಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ.


2018ರ ಫೆಬ್ರವರಿ 6ರಂದು ಬ್ರಿಟನ್ ನ ರಾಜಮನೆತನ ಬಕಿಂಗ್ ಹ್ಯಾಮ್ ಅರಮನೆಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು, ಸಮಾರಂಭದಲ್ಲಿ ಬ್ರಿಟನ್ ರಾಯಲ್ ಪ್ರಿನ್ಸ್ ಚಾರ್ಲ್ಸ್ ಅವರು ಭಾರತೀಯ ಕೈಗಾರಿಕೋದ್ಯಮಿ ರತನ್ ಟಾಟಾ ಅವರಿಗೆ ಲೋಕೋಪಕಾರಿ ಕೆಲಸಕ್ಕೆ ಜೀವಮಾನದ ಸಾಧನೆ ಪ್ರಶಸ್ತಿ ನೀಡಲು ಬಯಸಿದ್ದರು.


ರತನ್ ಟಾಟಾ ಆ ಕಾರ್ಯಕ್ರಮಕ್ಕೆ ಹಾಜರಾಗಲು ಸಾಧ್ಯವಾಗಲಿಲ್ಲ, ಈ ಬಗ್ಗೆ ಅಂಕಣಕಾರ ಸುಹೇಲ್ ಸೇಠ್ ಮಾಹಿತಿ ನೀಡಿದ್ದಾರೆ.


ಕಾರ್ಯಕ್ರಮಕ್ಕೆ ಹಾಜರಾಗಲು ತಾನು ಫೆಬ್ರವರಿ 2 ಅಥವಾ ಫೆಬ್ರವರಿ 3 ರಂದು ಲಂಡನ್ ತಲುಪಿದ್ದೆ. ಸುದೀರ್ಘ ವಿಮಾನ ಪ್ರಯಾಣದ ನಂತರ ಲಂಡನ್ ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ, ತಮ್ಮ ಫೋನ್ ನಲ್ಲಿ ರತನ್ ಟಾಟಾ ಅವರ 11 ಮಿಸ್ಡ್ ಕಾಲ್ ಇದ್ದಿದ್ದು ನೋಡಿ ಆಶ್ಚರ್ಯವಾಯಿತು. ಅವರ ಒಂದು ಸಾಕು ನಾಯಿಗೆ ತೀವ್ರ ಅನಾರೋಗ್ಯ ಕಾಡಿತ್ತು, ಅದಕ್ಕೆ ಕಾಯಿಲೆ ಇದೆ ಅದನ್ನು ಬಿಟ್ಟುಬರಲು ಸಾಧ್ಯವಿಲ್ಲ ಎಂದು ರತನ್ ಹೇಳಿದ್ದರು.


ಅವರ ಮನವೊಲಿಸಲು ಎಷ್ಟೇ ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ, ಆ ಕಾರ್ಯಕ್ರಮಕ್ಕೆ ಪ್ರಶಸ್ತಿ ಸ್ವೀಕರಿಸಲು ಅವರು ಬಂದಿರಲಿಲ್ಲ.


ಕಾರ್ಯಕ್ರಮಕ್ಕೆ ರತನ್ ಟಾಟಾ ಬಾರದಿರುವುದರ ಹಿಂದಿನ ಕಾರಣ ಕೇಳಿ ಪ್ರಿನ್ಸ್ ಚಾರ್ಲ್ಸ್ ಹೇಳಿದ್ದನ್ನ ಸುಹೇಲ್ ಸೇಠ್ ನೆನಪಿಸಿಕೊಂಡಿದ್ದಾರೆ, ರಾಜಕುಮಾರ ಚಾರ್ಲ್ಸ್ ಅವರು, ಮನುಷ್ಯನೆಂದರೆ ಹೀಗಿರಬೇಕು, ರತನ್ ಟಾಟಾ ಅದ್ಭುತ ವ್ಯಕ್ತಿ ಎಂದು ಹೇಳಿದ್ದರು.

Join Whatsapp
Exit mobile version