ಗಾಂಧೀನಗರ: ರಸ್ನಾ ಗ್ರೂಪ್’ನ ಸಂಸ್ಥಾಪಕ ಅಧ್ಯಕ್ಷ ಅರೀಜ್ ಪಿರೋಜ್ ಶಾ ಖಂಬಟ್ಟಾ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.
ಅರೀಜ್ ಅವರು ಬಹು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ತಿಳಿದು ಬಂದಿದೆ.
1970 ರ ದಶಕದಲ್ಲಿ ದುಬಾರಿ ವೆಚ್ಚದಲ್ಲಿ ಮಾರಾಟವಾಗುತ್ತಿದ್ದ ತಂಪು ಪಾನೀಯ ಉತ್ಪನ್ನಗಳಿಗೆ ಪರ್ಯಾಯವಾಗಿ ಕೈಗೆಟುಕುವ ದರದಲ್ಲಿ ರಸ್ನಾದ ತಂಪು ಪಾನೀಯ ಪ್ಯಾಕ್ ಗಳನ್ನು ತಯಾರಿಸುತ್ತಿದ್ದರು. ಇದು ದೇಶದಲ್ಲಿ 1.8 ಮಿಲಿಯನ್ ಚಿಲ್ಲರೆ ಅಂಗಡಿಗಳಲ್ಲಿ ಮಾರಾಟವಾಗುತ್ತಿದೆ. ಈಗ ವಿಶ್ವದ ಅತಿ ದೊಡ್ಡ ಸಾಫ್ಟ್ ಡ್ರಿಂಕ್’ಗಳಲ್ಲಿ ಒಂದಾಗಿರುವ ರಸ್ನಾ, ಅನೇಕ ಬ್ರಾಂಡ್ ಗಳಿಗೆ ಪೈಪೋಟಿ ನೀಡುವುದರ ಜೊತೆಗೆ ಹೆಚ್ಚಾಗಿ ಮಾರಾಟವಾಗುತ್ತಿದೆ.