Home ಕರಾವಳಿ ಪುತ್ರಿಯರಿಂದಲೇ ತಂದೆ ವಿರುದ್ಧ ಅತ್ಯಾಚಾರ ದೂರು: ಆರೋಪಿ ಖುಲಾಸೆ

ಪುತ್ರಿಯರಿಂದಲೇ ತಂದೆ ವಿರುದ್ಧ ಅತ್ಯಾಚಾರ ದೂರು: ಆರೋಪಿ ಖುಲಾಸೆ

ಮಂಗಳೂರು: ಅಪರೂಪದ ಪ್ರಕರಣವೊಂದರಲ್ಲಿ ಪುತ್ರಿಯರೇ ತಮ್ಮ ತಂದೆಯ ಮೇಲೆ ಮಾಡಿದ ಅತ್ಯಾಚಾರ ಆರೋಪದ ಪೈಕಿ ಒಂದು ಪ್ರಕರಣ ನಗರದ ಪೋಕ್ಸೋ ನ್ಯಾಯಾಲಯದಲ್ಲಿ ಖುಲಾಸೆಗೊಂಡಿದೆ.

ಇದೊಂದು ವಿಶೇಷ ಪ್ರಕರಣವಾಗಿದ್ದು, 2021ರ ಜೂನ್ ತಿಂಗಳಿನಲ್ಲಿ ಕಾಟಿಪಳ್ಳದ ನಿವಾಸಿಯಾದ 48ವರ್ಷದ ವ್ಯಕ್ತಿ ಮೇಲೆ ಅವರ ಇಬ್ಬರು ಹೆಣ್ಣು ಮಕ್ಕಳು ತಾವು ಅಪ್ರಾಪ್ತರಾಗಿ ಇದ್ದ ಸಂದರ್ಭದಲ್ಲಿ ನಮ್ಮ ತಂದೆ ನಮ್ಮ ಮೇಲೆ ಅತ್ಯಾಚಾರ ಎಸಗಿದ್ದಾರೆಂದು ಆರೋಪ ಮಾಡಿದ್ದರು. ಪ್ರಕರಣದ ಕುರಿತು ಮಂಗಳೂರಿನ ಮಹಿಳಾ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ಪೋಕ್ಸೋ ಕಾಯ್ದೆಯಡಿ ದಾಖಲಾಗಿದ್ದವು.

ಈ ಪೈಕಿ, ಆರೋಪಿಯ ಕಿರಿಯ ಮಗಳು ನನ್ನ ತಂದೆಯು ಸತತ ಮೂರು ವರ್ಷಗಳಿಂದ ಅತ್ಯಾಚಾರ ಮಾಡಿದ್ದಾರೆಂದು ಆರೋಪಿಸಿದ್ದಳು. ಈ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡ ಮಂಗಳೂರಿನ ಹೆಚ್ಚುವರಿ ಸತ್ರ ಮತ್ತು ಎರಡನೇ ಎಫ್ ಟಿಎಸ್ ಸಿ ಪೋಕ್ಸೋ ನ್ಯಾಯಾಲಯ ಪ್ರಕರಣದಲ್ಲಿ ಆರೋಪಿಯ ಮೇಲೆ ಆರೋಪ ಸಾಬೀತು ಮಾಡಲು ಯಾವುದೇ ಸರಿಯಾದ ಸಾಕ್ಷಾಧಾರಗಳು ಇಲ್ಲ ಎಂದು ನಿರ್ಧರಿಸಿತು.

ಈ ಹಿನ್ನೆಲೆಯಲ್ಲಿ ನ್ಯಾಯಾಧೀಶ ಕೆ.ಎಂ ರಾಧಾಕೃಷ್ಣ ಅವರು ಆರೋಪಿಯನ್ನು ಬಿಡುಗಡೆ ಮಾಡಲು ಆದೇಶ ಮಾಡಿದ್ದಾರೆ. ಆರೋಪಿ ಕಳೆದ ಒಂದೂವರೆ ವರ್ಷಗಳಿಂದ ಜೈಲುವಾಸ ಅನಭವಿಸಿದ್ದರು.
ಆರೋಪಿಯ ಪರವಾಗಿ ನ್ಯಾಯವಾದಿಗಳಾದ ಆಸಿಫ್ ಬೈಕಾಡಿ, ರುಬಿಯ ಅಕ್ತರ್, ಮುಹಮ್ಮದ್ ಅಸ್ಗರ್, ಶ್ರೀನಿಧಿ ಪ್ರಕಾಶ್, ನಿರೀಕ್ಷಾ ವಾದ ಮಂಡಿಸಿದ್ದರು.

Join Whatsapp
Exit mobile version